ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಹಿರಿಯ ಗಾಯಕಿ ಆಶಾ ಭೋಂಸ್ಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಮೃತಿ ಇರಾನಿ ವ್ಯಕ್ತಿತ್ವದ ಕುರಿತು ಟ್ವೀಟ್ ಮಾಡಿರುವ ಆಶಾ ಭೋಂಸ್ಲೆ, ಸ್ಮೃತಿ ಇರಾನಿ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಕೆ ಕಾಳಜಿ ವಹಿಸುತ್ತಾರೆ ಅದಕ್ಕಾಗಿಯೇ ಅಮೇಥಿಯಲ್ಲಿ ಗೆದ್ದಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ಪಡೆದು ತೆರಳಿದ್ದ ಆಶಾ ಭೋಂಸ್ಲೆ ಜನಸಂದಣಿಯಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿದ ಸ್ಮೃತಿ ಇರಾನಿ ತಕ್ಷಣವೇ ಆಶಾ ಭೋಂಸ್ಲೆ ಅವರ ನೆರವಿಗೆ ಧಾವಿಸಿ ಸುರಕ್ಷಿತವಾಗಿ ಮನೆಗೆ ತೆರಳುವಂತೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿ ಸ್ಮೃತಿ ಇರಾನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.