ದೇಶ

ಬಳಕೆದಾರರ ಖಾಸಗಿತನ ರಕ್ಷಣೆಗೆ ಬದ್ಧ: ವಾಟ್ಸ್‌ಆ್ಯಪ್‌

Srinivasamurthy VN

ನವದೆಹಲಿ: ಸ್ಪೈವೇರ್ ಬಳಕೆ ಮಾಡಿ ಬಳಕೆದಾರರ ಮಾಹಿತಿ ಕಲೆಹಾಕಲಾಗುತ್ತಿದೆ ಎಂಬ ಸುದ್ದಿಯ ನಡುವೆಯೇ ಈ ಹಗರಣ ಸಂಬಂಧ ವಾಟ್ಸಪ್ ಪ್ರತಿಕ್ರಿಯೆ ನೀಡಿದ್ದು, ಬಳಕೆದಾರರ ಖಾಸಗಿತನ ರಕ್ಷಣೆಗೆ ಬದ್ಧ ಎಂದು ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಾಟ್ಸಪ್, 'ಎಲ್ಲ ಜನರ ಖಾಸಗಿತನ ರಕ್ಷಣೆಯಾಗಬೇಕು ಎಂಬ ಭಾರತ ಸರ್ಕಾರದ ನಿಲುವನ್ನು ಬೆಂಬಲಿಸುವುದಾಗಿ ವಾಟ್ಸ್‌ಆ್ಯಪ್‌ ಸಂಸ್ಥೆ ಹೇಳಿದೆ. ಗೂಢಚರ್ಯೆ ನಡೆಸಿ, ಖಾಸಗಿತನ ಉಲ್ಲಂಘನೆ ಮಾಡಿದವರ ವಿರುದ್ಧ ‘ಕಠಿಣ ಕ್ರಮ’ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಭಾರತ ಸರ್ಕಾರದ ಸೂಚನೆಗೆ ಬದ್ಧ, ಶೀಘ್ರ ವಿವರ ಸಲ್ಲಿಕೆ
ಇದೇ ವೇಳೆ ಬಳಕೆದಾರರ ಮಾಹಿತಿ ರಕ್ಷಣೆ ಕುರಿತಂತೆ ಭಾರತ ಸರ್ಕಾರ ನೀಡಿರುವ ಸೂಚನೆಯನ್ನು ಪಾಲನೆ ಮಾಡುವುದಾಗಿ ಹೇಳಿರುವ ವಾಟ್ಸಪ್ ಸಂಸ್ಥೆ , ಗೂಢಚರ್ಯೆ ವಿಚಾರದಲ್ಲಿ ನವೆಂಬರ್ 4 ಅಂದರೆ ಸೋಮವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸಂಸ್ಥೆಗೆ ಸರ್ಕಾರ ಸೂಚಿಸಿತ್ತು. ಅದರಂತೆ ವಿವರ ನೀಡಲಾಗುವುದು ಎಂದಿದೆ. 

ಇನ್ನು ವಾಟ್ಸಪ್ ಮೂಲಕ ಗೂಢಚರ್ಯೆ ಮಾಡಲು ಕೇಂದ್ರ ಸರ್ಕಾರ ಇಸ್ರೇಲ್ ನೆರವು ಪಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕಾಗಿ ಪೆಗಾಸಸ್ ಎಂಬ ಸ್ಪೈವೇರ್ ಬಳಕೆ ಮಾಡುತ್ತಿದೆ ಎನ್ನಲಾಗಿದೆ.

SCROLL FOR NEXT