ದೇಶ

ದೆಹಲಿ ಅಲ್ಲ, ಅತಿ ಕಳಪೆ ಗುಣಮಟ್ಟದ ಗಾಳಿ ಇರೋದು ಭಾರತದ ಈ ಪ್ರದೇಶದಲ್ಲಿ!

Srinivas Rao BV

ಹರ್ಯಾಣ: ದೆಹಲಿ ಅಕ್ಷರಶಃ ಗ್ಯಾಸ್ ಚೇಂಬರ್ ನಂತಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ವರೆಗೂ ದೆಹಲಿಯ ಗಾಳಿ ಗುಣಮಟ್ಟವೇ ಅತ್ಯಂತ ಕಳಪೆಯಾಗಿದೆ ಎಂದುಕೊಳ್ಳುತ್ತಿದ್ದೆವು ಆದರೆ ಈಗ ಕಳಪೆ ಗುಣಮಟ್ಟದ ಗಾಳಿಯ ವಿಷಯದಲ್ಲಿ ದೆಹಲಿಯನ್ನೂ ಮೀರಿಸುವ ಪ್ರದೇಶ ಇದೆ ಎನ್ನುವುದು ತಿಳಿದುಬಂದಿದೆ. 

ದೆಹಲಿಯ ವಾಯು ಗುಣಮಟ್ಟಕ್ಕಿಂತಲೂ ಹರ್ಯಾಣದ ಫತೇಹಾಬಾದ್ ನ ವಾಯುಗುಣಮಟ್ಟ ಕಳಪೆಯಾಗಿರುವುದು ಅಧಿಕೃತ ಅಂಕಿ-ಅಂಶಗಳಿಂದ ತಿಳಿದುಬಂದಿದೆ. 

ಇತ್ತ ಉತ್ತರ ಪ್ರದೇಶ, ಪಾಟ್ನಾ, ಬಿಹಾರದ ವಾಯುಗುಣಮಟ್ಟ ದೆಹಲಿ ವಾಯುಗುಣಮಟ್ಟಕ್ಕಿಂತಲೂ ಕಳಪೆಯಾಗಿದೆ. ದೇಶಾದ್ಯಂತ 13 ನಗರಗಳಲ್ಲಿ ವಾಯುಗುಣಮಟ್ಟದ ಸೂಚ್ಯಂಕ 400 ಕ್ಕಿಂತ ಹೆಚ್ಚಿದ್ದು, ಅತ್ಯಂತ ಆತಂಕಕಾರಿ ವಿಷಯವಾಗಿದೆ. 

ದೆಹಲಿಯಲ್ಲಿ ವಾಯುಗುಣಮಟ್ಟದ ಸೂಚ್ಯಂಕ 399 ರಷ್ಟಿದ್ದು, ಫತೇಹಾಬಾದ್ ನಲ್ಲಿ 439 ರಷ್ಟಿದೆ, ಉತ್ತರ ಪ್ರದೇಶದ ಲಖನೌ ನಲ್ಲಿ 422 ರಷ್ಟು, ಪಾಟ್ನಾದಲ್ಲಿ 428 ರಷ್ಟಿದೆ.

SCROLL FOR NEXT