ನಡುರಸ್ತೆಯಲ್ಲಿ ಬೈಕ್ ನಲ್ಲಿಯೇ ಚೆಲ್ಲಾಟ! ನೆಟ್ಟಿಗರು ಏನಂದ್ರು ಗೊತ್ತಾ?
ಜೋಡಿಯೊಂದು ನಡು ರಸ್ತೆಯಲ್ಲಿ ಬೈಕ್ ನಲ್ಲಿಯೇ ರೋಮ್ಯಾನ್ಸ್ ಮಾಡಿರುವ ಘಟನೆ ರಜೌರಿಯಲ್ಲಿ ನಡೆದಿದೆ. ಅಪರಿಚಿತ ಯುವ ಜೋಡಿಯೊಂದು ವಾಹನ ದಟ್ಟಣೆಯಿರುವ ರಸ್ತೆಯಲ್ಲಿ ಮಾಡಿರುವ ಸ್ಟಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.
ರಜೌರಿ: ಜೋಡಿಯೊಂದು ನಡು ರಸ್ತೆಯಲ್ಲಿ ಬೈಕ್ ನಲ್ಲಿಯೇ ರೋಮ್ಯಾನ್ಸ್ ಮಾಡಿರುವ ಘಟನೆ ರಜೌರಿಯಲ್ಲಿ ನಡೆದಿದೆ. ಅಪರಿಚಿತ ಯುವ ಜೋಡಿಯೊಂದು ವಾಹನ ದಟ್ಟಣೆಯಿರುವ ರಸ್ತೆಯಲ್ಲಿ ಮಾಡಿರುವ ಸ್ಟಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.
ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿರುವ ಯುವತಿ, ಯುವಕನನ್ನು ತಬ್ಬಿಕೊಂಡು ಅವನನ್ನು ಚುಂಬಿಸುತ್ತಾ ನಡು ರಸ್ತೆಯಲ್ಲೇ, ಸರಸವಾಡುತ್ತಾ ಸಾಗಿದ್ದಾರೆ.
ಐಪಿಎಸ್ ಅಧಿಕಾರಿ ಹೆಚ್. ಪಿ. ಎಸ್ . ದಲಿವಾಲ್ ಈ ಜೋಡಿಯ ಆಟಗಳ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದು, ಪೊಲೀಸರು ಅವರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇಂತಹ ಚೆಲ್ಲಾಟ ತೆಡೆಗೆ ಮೋಟಾರು ವಾಹನ ಉಲ್ಲಂಘನೆಯ ಕಾಯ್ದೆಗೆ ನೂತನ ಸೆಕ್ಷನ್ ಗಳನ್ನು ಸೇರಿಸುವ ಅಗತ್ಯವಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.