ದೇಶ

ಎನ್‌ಆರ್‌ಸಿ ಜಾರಿ ಭವಿಷ್ಯದಲ್ಲಿ ಉಪಯೋಗ: ರಂಜನ್ ಗೊಗಾಯ್

Vishwanath S

ನವದೆಹಲಿ: ಸಾಕಷ್ಟು ಟೀಕೆ ಮತ್ತು ವಿವಾದಕ್ಕೆ ಗುರಿಯಾಗಿರುವ ಪೌರತ್ವ ನೋಂದಣಿ ಯೋಜನೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್ ಸಮರ್ಥಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಈ ಕ್ಷಣಕ್ಕೆ ಎನ್‌ಆರ್‌ಸಿ ಉಪಯುಕ್ತವೆನಿಸದೇ ಇರಬಹುದು. ಪೌರತ್ವ ಪಟ್ಟಿಯಿಂದ 19 ಲಕ್ಷ ಅಥವಾ 40 ಲಕ್ಷ ಜನರು ಹೊರಗಿದ್ದಾರೆಂಬುದು ಮುಖ್ಯವಲ್ಲ. ಆದರೆ ಇದು ಭವಿಷ್ಯಕ್ಕಾಗಿ ಒಂದು ಮೂಲ ದಾಖಲೆಯಾಗಿದೆ ಎಂದರು. 

ಕೆಲವರು ಎನ್ಆರ್ಸಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಟು ವಿಮರ್ಶೆ ನಡೆಸಿದ್ದಾರೆ. ಎನ್ಆರ್ಸಿ ಯೋಜನೆ ಬಗ್ಗೆ ಈ ಜನರು ಮಾಡುತ್ತಿರುವ ಆರೋಪಗಳಿಗೆ ಸತ್ಯಾಂಶವಿಲ್ಲ ಎಂದು ರಂಜನ್ ಗೋಗಾಯ್ ಹೇಳಿದ್ದಾರೆ. 

SCROLL FOR NEXT