ಇಂಫಾಲ್ ನ ತಂಗಲ್ ಬಜಾರ್ ನಲ್ಲಿ ಸ್ಫೋಟಕ್ಕೆ ಹಾನಿಗೀಡಾದ ವಾಹನಗಳು 
ದೇಶ

ಮಣಿಪುರ: ಬೆಚ್ಚಿಬೀಳಿಸಿದ ಇಂಫಾಲ್ ನ ಪ್ರಬಲ ಬಾಂಬ್ ಸ್ಫೋಟ, ಐವರು ಪೊಲೀಸರು ಸೇರಿ 6 ಮಂದಿಗೆ ಗಾಯ, ವಿಡಿಯೊ ವೈರಲ್ 

ಮಣಿಪುರ ರಾಜಧಾನಿ ಇಂಫಾಲ್ ನಗರದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಐವರು ಪೊಲೀಸ್ ಕಮಾಂಡೊಗಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. 

ಇಂಫಾಲ್: ಮಣಿಪುರ ರಾಜಧಾನಿ ಇಂಫಾಲ್ ನಗರದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಐವರು ಪೊಲೀಸ್ ಕಮಾಂಡೊಗಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. 


ಇಂಫಾಲ್ ನ ತಂಗಾಲ್ ಬಜಾರ್ ನಲ್ಲಿ ಇಂದು ಬೆಳಗ್ಗೆ 9.30ರ ಹೊತ್ತಿಗೆ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಗಾಯಗೊಂಡವರಲ್ಲಿ ಇಂಫಾಲ್ ಪಶ್ಚಿಮ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್, ಸಬ್ ಇನ್ಸ್ ಪೆಕ್ಟರ್, ಇಬ್ಬರು ಸಹಾಯಕ ಎಸ್ಐ ಮತ್ತು ರೈಫಲ್ ಮ್ಯಾನ್ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


ಸ್ಫೋಟದಲ್ಲಿ ನಾಗರಿಕರೊಬ್ಬರಿಗೆ ಸಹ ಗಾಯವಾಗಿದೆ, ಅಕ್ಕಪಕ್ಕದಲ್ಲಿದ್ದ ಕೆಲವು ವಾಹನಗಳಿಗೆ ಸಹ ಹಾನಿಯಾಗಿದೆ. 
ಗಾಯಗೊಂಡವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಫೋಟದ ಜಾಗವನ್ನು ಸದ್ಯ ಸುತ್ತುವರಿದು ಪೊಲೀಸ್ ಅಧಿಕಾರಿಗಳು ಕಣ್ಗಾವಲು ಇರಿಸಿದ್ದಾರೆ. 


ಇಂಫಾಲ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಎರಡನೇ ಸ್ಫೋಟ ಇದಾಗಿದೆ. 


ಮೊನ್ನೆ 2ನೇ ತಾರೀಖು ಸುಧಾರಿತ ಸ್ಫೋಟಕವನ್ನು ಇಂಫಾಲ್ ಪೂರ್ವ ಜಿಲ್ಲೆಯ ತೆಲಿಪಟಿ ಪ್ರದೇಶದಲ್ಲಿ ದುಷ್ಕರ್ಮಿಗಳು ಸ್ಫೋಟಿಸಿ ಮೂವರು ಬಿಎಸ್ಎಫ್ ಜವಾನರು ಗಾಯಗೊಂಡಿದ್ದರು.

ಬಾಂಬ್ ಸ್ಫೋಟದ ದೃಶ್ಯಗಳನ್ನು ಇಲ್ಲಿ ನೋಡಬಹುದು-

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!