ದೇಶ

ಅಯೋದ್ಯಾ ತೀರ್ಪು ನ್ಯಾಯಯುತವಾಗಿಲ್ಲ, ನಿರಾಸೆ ತಂದಿದೆ: ಪಿಎಫ್ ಐ

Lingaraj Badiger

ನವದೆಹಲಿ: ಅಯೋಧ್ಯಾ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಿರಾಸೆ ತಂದಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ ಐ) ಶನಿವಾರ ಹೇಳಿದೆ.

ಈ ಕುರಿತು ಹೇಳಿಕೆ ನೀಡಿರುವ ಪಿಎಫ್ ಐ ಪ್ರಧಾನ ಕಾರ್ಯದರ್ಸಿ ಎಂ.ಮೊಹಮ್ಮದ್ ಅಲಿ ಜಿನ್ಹಾ, ಸುಪ್ರೀಂಕೋರ್ಟ್ ಯಾವುದೇ ದೇಗುಲ ನಿರ್ಮಾಣಕ್ಕೆ ಮುನ್ನ ಯಾವುದೇ ಮಸೀದಿ ನಿರ್ಮಾಣವಾಗಿರಲಿಲ್ಲ ಎಂಬ ಮಾತನ್ನು ಪುನರುಚ್ಚರಿಸಿದ್ದು, 1949ರಲ್ಲಿ ಮಸೀದಿಯಲ್ಲಿ ವಿಗ್ರಹಗಳನ್ನು ಇರಿಸಲಾಗಿತ್ತು ಎಂಬ ಸತ್ಯವನ್ನು ಒಪ್ಪಿಕೊಂಡಿದೆ. 1992ರಲ್ಲಿ ಮಸೀದಿ ನೆಲಸಮಗೊಳಿಸಿದ್ದು ಕಾನೂನು ಬಾಹಿರ ಎಂದೂ ಅಭಿಪ್ರಾಯಪಟ್ಟಿದೆ. ಆದರೆ, ದುರದೃಷ್ಟವಶಾತ್, ಈ ಎಲ್ಲಾ ಅಂಶಗಳನ್ನು ಒಪ್ಪಿಕೊಂಡ ನಂತರವೂ ಸುಪ್ರೀಂಕೋರ್ಟ್, ಮಸೀದಿ ನೆಲಸಮಗೊಂಡ ಸಂಫೂರ್ಣ ದೇಗುಲ ನಿರ್ಮಾಣಕ್ಕೆ ಹಸ್ತಾಂತರಿಸಿದೆ. ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಪರ್ಯಾಯ ಭೂಮಿ ನೀಡುವ ತೀರ್ಮಾನ ನ್ಯಾಯಯುತವಾಗಿಲ್ಲ ಎಂದಿದ್ದಾರೆ.

ಈ ತೀರ್ಪಿನಿಂದ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಮಾತ್ರವಲ್ಲದೆ ಭಾರತೀಯ ಸಂವಿಧಾನದ ಮೂಲಭೂತ ಸಿದ್ಧಾಂತಗಳ ಮೇಲೂ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳಲಿದೆ ಎಂದಿದ್ದಾರೆ. 

SCROLL FOR NEXT