ದೇಶ

ಶಬರಿಮಲೆಗೆ ಹೋಗುವ ಮಹಿಳೆಯರಿಗೆ ಸರ್ಕಾರ ರಕ್ಷಣೆ ನೀಡುವುದಿಲ್ಲ: ದೇವಸ್ವಂ ಸಚಿವ

Sumana Upadhyaya

ತಿರುವನಂತಪುರಂ:ಶಬರಿಮಲೆಗೆ ಹೋಗುವ ಮಹಿಳೆಯರಿಗೆ ಸರ್ಕಾರದಿಂದ ಯಾವುದೇ ಭದ್ರತೆ ನೀಡುವುದಿಲ್ಲ ಎಂದು ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ. ಈ ಮೂಲಕ ಶಬರಿಮಲೆಗೆ ಹೋಗುವ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ಸಹಮತವಿಲ್ಲ ಎಂಬ ಮಾತನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ.


ಶಬರಿಮಲೆ ಕಾರ್ಯಕರ್ತರ ಕ್ರಿಯಾವಾದಕ್ಕೆ ಇರುವ ಸ್ಥಳವಲ್ಲ, ಅಲ್ಲಿಗೆ ಹೋಗಲು ಇಚ್ಛಿಸುವ ಮಹಿಳೆಯರು ಸುಪ್ರೀಂ ಕೋರ್ಟ್ ಆದೇಶವನ್ನಿಟ್ಟುಕೊಂಡು ತಮ್ಮ ಜಾಗ್ರತೆಯಲ್ಲಿಯೇ ಹೋಗಬೇಕು ಎಂದರು.


ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಮಹಿಳೆಯರನ್ನು ಶಬರಿಮಲೆಗೆ ಕರೆದುಕೊಂಡು ಹೋಗುವುದಿಲ್ಲ. ಈ ಹಿಂದೆ ಕೂಡ ಮಹಿಳೆಯರನ್ನು ಸರ್ಕಾರ ಕರೆದುಕೊಂಡು ಹೋಗಿರಲಿಲ್ಲ. ಇನ್ನು ಮುಂದೆ ಕೂಡ ಇಲ್ಲ ಎಂದು ತಿಳಿಸಿದರು.


ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಅಂತವರು ಪ್ರಚಾರಕ್ಕೋಸ್ಕರ ಹೀಗೆಲ್ಲಾ ಮಾಡುತ್ತಾರೆ. ಅಂತವರು ಭಕ್ತಿಯಿಂದ ಶಬರಿಮಲೆಗೆ ಹೋಗುವುದಲ್ಲ, ವೈಯಕ್ತಿಕ ಹಿತಾಸಕ್ತಿಗಾಗಿ ಹೀಗೆ ಮಾಡುತ್ತಾರೆ. ಸರ್ಕಾರ ಇಂತವರಿಗೆ ಬೆಂಬಲ ಕೊಡುವುದಿಲ್ಲ ಎಂದು ಕಡಕಂಪಲ್ಲಿ ಹೇಳಿದರು.


ಶಬರಿಮಲೆಯ ವಾರ್ಷಿಕ ಮಂಡಲಪೂಜೆ ಅವಧಿಯಲ್ಲಿ ಯಾತ್ರಿಕರು ಶಾಂತಿ ಕಾಪಾಡುವಂತೆ ಸಚಿವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.

SCROLL FOR NEXT