ದೇಶ

ಅರುಣಾಚಲ ಪ್ರದೇಶಕ್ಕೆ ರಾಜನಾಥ್ ಸಿಂಗ್ ಭೇಟಿ: ಚೀನಾ ಆಕ್ಷೇಪ

Manjula VN

ಬೀಜಿಂಗ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಶುಕ್ರವಾರ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

ಮೈತ್ರಿ ದಿನದ ಅಂಗವಾಗಿ ರಾಜನಾಥ್ ಸಿಂಗ್ ಅವರು ಚೀನಾ ಗಡಿ ಸಮೀಪದ ತವಾಂಗ್'ಗೆ ಗುರುವಾರ ಭೇಟಿ ನೀಡಿದ್ದರು. ಇದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. 

ಅರುಣಾಚಲ ಪ್ರದೇಶ ಎಂದು ಕರೆಯುವ ಭಾರತದ ನಡವಳಿಕೆಯನ್ನು ಚೀನಾ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಅಲ್ಲಿ ಭಾರತೀಯ ಅಧಿಕಾರಿಘಳು ಹಾಗೂ ನಾಯಕರು ಮಾಡುವ ಕೆಲಸವನ್ನು ನಾವು ವಿರೋಧಿಸುತ್ತೇವೆ. ನಮ್ಮ ಹಿತಾಸಕ್ತಿಯನ್ನು ಭಾರತ ಗೌರವಿಸಬೇಕು ಎಂದು ಚೀನಾ ವಿದೇಶಾಂಗ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ. 

ಭಾರತದ ಈಶಾನ್ಯ ರಾಜ್ಯಗಳ ಭಾಗವಾದ ಅರುಣಾಚಲ ಪ್ರದೇಶ ದಕ್ಷಿಣ ಭಾಗದ ಟಿಬೆಟ್'ನ ಒಂದು ಭಾಗವೂ ಹೌದು. ಈ ಸಂಬಂಧ ಉಂಟಾಗಿರುವ ಗಡಿ ವಿವಾದದ ಬಗ್ಗೆ ಈವರೆಗೆ ಉಭಯ ದೇಶಗಳ ನಡುವೆ 21 ಸುತ್ತು ಮಾತುಕತೆಗಳು ನಡೆದಿದೆ. 3488 ಕಿಮೀ ಉದ್ದದ ಗಡಿ ಭಾಗ ವಿವಾದದಲ್ಲಿದೆ. 

SCROLL FOR NEXT