ಕೇಂದ್ರ ಸಚಿವ ಗಿರಿರಾಜ್ ಸಿಂಗ್ 
ದೇಶ

'ಸನಾತನ' ಧರ್ಮ ಪ್ರಾಬಲ್ಯವಿರುವವರೆಗೆ ಮಾತ್ರ ದೇಶ ಸುರಕ್ಷಿತ- ಕೇಂದ್ರ ಸಚಿವ ಗಿರಿರಾಜ್ ಸಿಂಗ್ 

ಸನಾತನ ಧರ್ಮ ಪ್ರಾಬಲ್ಯವಿರುವವರೆಗೆ ಮಾತ್ರ ದೇಶ ಸುರಕ್ಷಿತವಾಗಿರುತ್ತದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಾಕ ಹೇಳಿಕೆಯನ್ನು ನೀಡಿದ್ದಾರೆ.

ನವ ದೆಹಲಿ: ಸನಾತನ ಧರ್ಮ ಪ್ರಾಬಲ್ಯವಿರುವವರೆಗೆ ಮಾತ್ರ ದೇಶ ಸುರಕ್ಷಿತವಾಗಿರುತ್ತದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಾಕ ಹೇಳಿಕೆಯನ್ನು ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ದೇಶದಲ್ಲಿನ ಜನಸಂಖ್ಯಾ ಸ್ಫೋಟ ನಡೆಯುತ್ತಿರುವ ರೀತಿ, ನಾವು ಎಚ್ಚರವಾಗಿರಲು ಸಮಯವಾಗಿದೆ. ಜನಸಂಖ್ಯೆಯನ್ನು ಧರ್ಮದೊಂದಿಗೆ ಸಂಪರ್ಕಿಸುವ ಅಗತ್ಯವಿದೆ. ಪೂಜಾರಿಗಳ ಕೈಯಲ್ಲಿ ಮಂದಿರಗಳನ್ನು ಬಿಟ್ಟು, ಹಿಂದೂಗಳನ್ನು ಜಾಗೃತಗೊಳಿಸಲು ಹಳ್ಳಿಗಳ ಕಡೆಗೆ ತೆರಳಿ. ಒಂದು ವೇಳೆ ಹಿಂದೂ ಧರ್ಮ ತೊರೆದರೆ ನಮ್ಮ ಗುರುತಿಸುವಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದರು.

ಸನಾತನ ಧರ್ಮದ ಸಿದ್ದಾಂತಗಳು ಮತ್ತು ಅದರ ಉಪದೇಶಗಳನ್ನು ಅಂತರ್ಗತತೆಯನ್ನು ಕಲಿಸುವುದರಿಂದ ಹಿಂದೂಗಳು ಮತಾಂಧರಗೊಳ್ಳಲು ಸಾಧ್ಯವಿಲ್ಲ ಎಂದ ಅವರು, ಕೆಲವು ಧರ್ಮಗಳು ತಮ್ಮ ತತ್ವ ಸಿದ್ದಾಂತಗಳನ್ನು ಅನುಸರಿಸದ ಜನರನ್ನು ಕಾಫಿರ್ ಅಂತಾ ಘೋಷಿಸುತ್ತವೆ ಮತ್ತು ಅವರ ವಿರುದ್ಧ ಜಿಹಾದ್ ಗೆ ಕರೆ ನೀಡುತ್ತವೆ ಎಂದು ಯಾವುದೇ ಧರ್ಮವನ್ನು ಹೆಸರಿಸದೆ ಹೇಳಿದರು. 

ನಮ್ಮ  ಹಿರಿಯರು ಮತ್ತು ಪೂರ್ವಜರು ಯಾವ ರೀತಿ ಇರಬೇಕೆಂದು ನಮಗೆ ಕಲಿಸಿದ ಕಾರಣ ನಾವು ಬದಲಾಗಲು ಸಾಧ್ಯವಿಲ್ಲ. ನಾವು ಯಾವ ಜಾತಿ ಅಥವಾ ಸಮಾಜಕ್ಕೆ ಸೇರಿದವನು ಎಂಬುದು ಮುಖ್ಯವಲ್ಲ, ಬೆಳಗ್ಗೆ ಇರುವೆಗೆ ಬೆಲ್ಲ, ಸಸ್ಯಗಳಿಗೆ ನೀರು ಮತ್ತು ನಾಗರಪಂಚಮಿಯಲ್ಲಿ ಹಾವುಗಳು ಕಚ್ಚಬಹುದು ಎಂಬ ಭಯ ಇದ್ದರೂ ಸಹ ಹಾಲನ್ನು ಹಾಕುತ್ತೇವೆ ಎಂದರು. 

ಯಾರಾದರೂ ಏಕಾದಶಿಯ ದಿನ ಉಪವಾಸ ಮಾಡದೆ ದೇವಾಲಯಕ್ಕೆ ಬರದಿದ್ದರೆ ಅಂತಹವರ ವಿರುದ್ಧ ಇತರ ಧರ್ಮಗಳ ರೀತಿಯಲ್ಲಿ ಕಾಫಿರ್ ಅಂತಾ ಘೋಷಿಸಿ ಜಿಹಾದ್ ಗೆ ಕರೆ ನೀಡುವುದಿಲ್ಲ ಎಂದು ಅವರು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT