ದೇಶ

ಇಸಿಸ್ ಉಗ್ರ ನಾಯಕ ಬಗ್ದಾದಿ, ಓವೈಸಿ ನಡುವೆ ಯಾವ ವ್ಯತ್ಯಾಸವಿಲ್ಲ: ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ರಿಜ್ವಿ

Raghavendra Adiga

ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂಐಎಂ) ನಾಯಕ ಅಸಾದುದ್ದೀನ್ ಒವೈಸಿ ಹಾಗೂ ಇಸೀಸ್ ನಾಯಕ ಅಬೂಬಕರ್-ಅಲ್ ಬಾಗ್ದಾದಿ ಅವರ ನಡುವೆ ಯಾವ ವ್ಯತ್ಯಾಸಗಳಿಲ್ಲ ಎಂದು ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸಿಮ್ ರಿಜ್ವಿ ಆರೋಪಿಸಿದ್ದಾರೆ. 

"ಅಬೂಬಕರ್-ಅಲ್ ಬಾಗ್ದಾದಿ ಮತ್ತು ಅಸಾದುದ್ದೀನ್ ಒವೈಸಿ ನಡುವೆ ಇದೀಗ ಯಾವ ವ್ಯತ್ಯಾಸ ಉಳಿದಿಲ್ಲ. ಬಾಗ್ದಾದಿಯಲ್ಲಿ ಸೈನ್ಯ ಮತ್ತು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳಿವೆ, ಅದನ್ನು ಆತ ಭಯೋತ್ಪಾದನೆಯನ್ನು ಹರಡಲು ಬಳಸುತ್ತಿದ್ದನು, ಓವೈಸಿ ತನ್ನ 'ಜಬಾನ್' (ಭಾಷಣಗಳು) ಮೂಲಕ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದ್ದಾನೆ. ಮುಸ್ಲಿಮರು ಭಯೋತ್ಪಾದನೆ ಮತ್ತು ರಕ್ತಪಾತದ ಕೃತ್ಯಗಳ ಕಡೆಗೆಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮೇಲೆ ನಿಷೇಧ ಹೇರಬೇಕಾದ ಸಮಯ ಬಂದಿದೆ " ರಿಜ್ವಿ ಹೇಳಿದ್ದಾರೆ.

ಶನಿವಾರ ಎಎನ್‌ಐ ಸುದ್ದಿಸಂಸ್ಥೆಯೊಡನೆ ಮಾತನಾಡಿದ ರಿಜ್ವಿ ರಾಮ ಜನ್ಮಭೂಮಿ-ಬಾಬರಿ ಮಸೀದಿ ಶೀರ್ಷಿಕೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಎಐಎಂಐಎಂ ಮುಖ್ಯಸ್ಥ ಮಾಡಿದ ಭಾಹಣದ ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ.

ಅಯೋಧ್ಯೆ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ ಎಐಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರುದ್ಧ ನವೆಂಬರ್ 11 ರಂದು ದೂರು ದಾಖಲಾಗಿದೆ.ತೀರ್ಪಿನ ನಂತರ, ಓವೈಸಿ "ಸುಪ್ರೀಂ ಕೋರ್ಟ್ ನಿಜಕ್ಕೂ ಸರ್ವೋಚ್ಚ ಆದರೆ ದೋಷಾತೀತ ಅಲ್ಲ"  ಎಂದಿದ್ದರು.

"ನಾನು ತೀರ್ಪಿನಿಂದ ತೃಪ್ತಿ ಹೊಂದಿಲ್ಲ. ನಮಗೆ ಸಂವಿಧಾನದ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ನಮ್ಮ ಕಾನೂನು ಹಕ್ಕುಗಳಿಗಾಗಿ ನಾವು ಹೋರಾಡುತ್ತಿದ್ದೆವು. ನಮಗೆ ಐದು ಎಕರೆ ಜಮೀನಿನ ದಾನ ಬೇಕಿಲ್ಲ" ಓವೈಸಿ ಹೇಳಿದ್ದರು.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ತೀರ್ಪಿನ ಬಗ್ಗೆ ತಾಳಿದ್ದ ನಿಲುವಿಗೆ  ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ."ಇದು ಸುಪ್ರೀಂ ಕೋರ್ಟ್‌ನ ಒಂದು ದೊಡ್ಡ ನಿರ್ಧಾರವಾಗಿತ್ತು, ಇದುವರೆಗೆ ನಾನು ನೋಡಿಲ್ಲ, ಇದು ಎಲ್ಲಾ ಸಮುದಾಯಗಳನ್ನು ತೃಪ್ತಿಪಡಿಸಿದೆ. ಆದರೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಅಸಾದುದ್ದೀನ್ ಒವೈಸಿ ಮುಂತಾದ ಕೆಲವು ಪಕ್ಷಗಳು ಸಾಂಪ್ರದಾಯಿಕ ಮನಸ್ಥಿತಿಗೆ ಉತ್ತೇಜನ ನೀಡುತ್ತಿವೆ ಇಂತಹವರ ಮೇಲೆ ನಿಷೇಧ ಹೇರಬೇಕು"ರಿಜ್ವಿ ಹೇಳಿದರು.

ಇದಕ್ಕೂ ಮುನ್ನ ನವೆಂಬರ್ 15 ರಂದು ರಿಜ್ವಿ ದೇವಾಲಯದ ನಿರ್ಮಾಣಕ್ಕಾಗಿ ಅಯೋಧ್ಯೆಯ ಶ್ರೀ ರಾಮ್ ಜನ್ಮಭೂಮಿ ನ್ಯಾಸ್ ಗೆ  51,000 ರೂ. ದೇಣಿಗೆ ನೀಡಿದ್ದರು.

ದೇವಾಲಯ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳವನ್ನು ಹಸ್ತಾಂತರಿಸುವಂತೆ ಮತ್ತು ಅದಕ್ಕಾಗಿ ಒಂದು ಟ್ರಸ್ಟ್ ಅನ್ನು ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅದೇ ವೇಳೆ ಐದು ಎಕರೆ ಅಳತೆಯ ಸೂಕ್ತವಾದ ಪ್ರತ್ಯೇಕ ಜಾಗವನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆ   ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಐತಿಹಾಸಿಕ ತೀರ್ಪಿನೊಡನೆ  ದಶಕಗಳ ಕಾಲದ ವ್ಯಾಜ್ಯ ಕೊನೆಯಾಗಿದೆ.

SCROLL FOR NEXT