ದೇಶ

ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿಸುವ ಪ್ರಕ್ರಿಯೆ ದೂರಗಾಮಿ ಹೆಜ್ಜೆ, ಇದಕ್ಕೆ ರಾಜ್ಯಸಭೆ ಸಲಹೆ ಬೇಕಿತ್ತು: ನಮೋ ಸರ್ಕಾರವನ್ನು ತಿವಿದ ಮನಮೋಹನ್ ಸಿಂಗ್

Raghavendra Adiga

ನವದೆಹಲಿ: ರಾಜ್ಯವನ್ನು ವಿಭಜಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿರುವುದು ದೂರದೃಷ್ಟಿಯ ಹೆಜ್ಜೆಯಾಗಿದ್ದು ಇಂತಹಾ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಚರ್ಚಿಸಬೇಕಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

"ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸುವುದು ಬಹುದೊಡ್ಡ ಪ್ರಸ್ತಾವನೆ ಮತ್ತು ಮಹತ್ವದ ಕಾನೂನಾಗಿರುತ್ತದೆ. ರಾಜ್ಯಗಳ ಪ್ರಾತಿನಿಧಿಕ ಮಂಡಳಿಯಾಗಿರುವ ಈ ರಾಜ್ಯಸಭೆಗೆ ಇಂತಹಾ ನಿರ್ಣಯ ತೆಗೆದುಕೊಳ್ಳುವ ಮುನ್ನ ತಿಳಿಸುವುದು ಮತ್ತು ಇಲ್ಲಿನ ಸದಸ್ಯರಿಗೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನೀಡುವುದು ಅಗತ್ಯವಿದೆ. " ಸಿಂಗ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

'ಉತ್ತುಂಗಕ್ಕೇರಿದ ಭಾವನಾತ್ಮಕ ವಾತಾವರಣದಲ್ಲಿ ಯಾವುದೇ ಕಾನೂನುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಮೇಲ್ಮನೆಯ ಕರ್ತವ್ಯ” ಅವರು ಹೇಳಿದ್ದಾರೆ.

ರಾಜ್ಯಸಭೆಯ ಕಾರ್ಯವೈಖರಿ ಸುಧಾರಣೆಗೆ ಹಲವು ಅಂಶಗಳನ್ನು ಸೂಚಿಸಿದ ಮನಮೋಹನ್ ಸಿಂಗ್ "ಸದಸ್ಯರು ಸಮಸ್ಯೆಗಳನ್ನು ಹೆಚ್ಚು ಆಳವಾಗಿ ಅಧ್ಯಯನ ಮಾಡಲು ಅನುವು ಮಾಡಿಕೊಡಲು ಸಾಕಷ್ಟು ಸಂಶೋಧನಾ ಸಿಬ್ಬಂದಿಗಳಂತಹ ಹೆಚ್ಚುವರಿ ಸಂಪನ್ಮೂಲಗಳನ್ನು ಪಡೆಯಬೇಕು" ಎಂದರು.

"ಪ್ರತಿ ವರ್ಷ ರಾಜ್ಯಸಭೆಯು ಕೇಂದ್ರ-ರಾಜ್ಯ ಸಂಬಂಧವನ್ನು ಚರ್ಚಿಸಲು ಸಮಯವನ್ನು ಕಂಡುಕೊಳ್ಳಬೇಕೆಂದು ನಾನು ಸೂಚಿಸುತ್ತೇನ. ಹಾಗೆಯೇ ರಾಷ್ಟ್ರದ ಆರೋಗ್ಯ ಮತ್ತು ಶಿಕ್ಷಣದ ಸ್ಥಿತಿಯ ಬಗ್ಗೆಯೂ ಚರ್ಚೆಗಳು ನಡೆಯಬೇಕು" ಸಿಂಗ್ ಹೇಳಿದ್ದಾರೆ.

SCROLL FOR NEXT