ಶರದ್ ಪವಾರ್-ನರೇಂದ್ರ ಮೋದಿ-ಅಮಿತ್ ಶಾ 
ದೇಶ

ಪ್ರಧಾನಿ ಮೋದಿ - ಅಮಿತ್ ಶಾ ಹೆಣೆದ ಸೂತ್ರಕ್ಕೆ ಶರದ್ ಪವಾರ್ ಪಂಕ್ಚರ್ ಆಗಿದ್ದೇಗೆ?

ಮಹಾರಾಷ್ಟ್ರ ರಾಜಕೀಯಲದಲ್ಲಿ ಹೊಸ ಮತ್ತು ಅನಿರೀಕ್ಷಿತ ಬೆಳವಣಿಗೆಗೆ ನಡೆದಿದ್ದು ಇದರ ಹಿಂದೆ ಬಿಜೆಪಿ ಹೈಕಮಾಂಡ್ ನ ಕಾಣದ ಕೈಗಳು ಬಹಳ ಸೈಲೆಂಟ್ ಆಗಿ ಕೆಲಸ ಮಾಡಿ ಮುಗಿಸಿದೆ.

ನವದೆಹಲಿ: ಮಹಾರಾಷ್ಟ್ರ ರಾಜಕೀಯಲದಲ್ಲಿ ಹೊಸ ಮತ್ತು ಅನಿರೀಕ್ಷಿತ ಬೆಳವಣಿಗೆಗೆ ನಡೆದಿದ್ದು ಇದರ ಹಿಂದೆ ಬಿಜೆಪಿ ಹೈಕಮಾಂಡ್ ನ ಕಾಣದ ಕೈಗಳು ಬಹಳ ಸೈಲೆಂಟ್ ಆಗಿ ಕೆಲಸ ಮಾಡಿ ಮುಗಿಸಿದೆ. 

ಮೊನ್ನೆಯಷ್ಟೆ ಉದ್ದವ ಠಾಕ್ರೆ ಮುಂದಿನ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದ ಶರದ್ ಪವಾರ್ ಕೊನೆಯಲ್ಲಿ ನಿಲುವು ಬದಲಿಸಲು ಕಾರಣವೇನು? ಇದರ ಹಿಂದಿನ  ಶಕ್ತಿ ಯಾರು? ಎಂಬ ಚರ್ಚೆಗಳು ನಡೆಯುತ್ತಿವೆ . 

ಇದರ ಹಿಂದೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಮಾತು ಕೇಳಿಬಂದಿದೆ.

ಹೌದು ರಾಜಕೀಯ ವಿಶ್ಲೇಷಕರ ಪ್ರಕಾರ, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಮುಂದುವರೆದಿತ್ತು. ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಶಿವಸೇನೆ ಸರ್ಕಾರ ರಚಿಸುವ ಕನಸು ಕಾಣುತ್ತಿತ್ತು. ಅಲ್ಲದೆ ಈ ಸಂಬಂಧ ಹಲವು ಮಹತ್ವದ ಚರ್ಚೆಗಳನ್ನು ಮೂರು ಪಕ್ಷಗಳು ನಡೆಸುತ್ತಿದ್ದವು. ಆದರೆ ಬಿಜೆಪಿ ಮಾತ್ರ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡದೇ ಒಳಗೊಳಗೆ ತಾನು ಅಂದುಕೊಂಡ ಕೆಲಸವನ್ನು ನಾಜೂಕಾಗಿ ಮಾಡಿ ಮುಗಿಸಿದೆ. 

ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರಿಗೂ ತಿಳಿಯದಂತೆ ಅವರ ಸಹೋದರನ ಪುತ್ರ ಅಜಿತ್ ಪವಾರ್ ಜೊತೆ ಬಿಜೆಪಿ ಗುಪ್ತ ಮಾತುಕತೆ ನಡೆಸಿ ಬೆಂಬಲ ಪಡೆದು ಇಂದು ದಿಢೀರ್ ಅಂತಾ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

19 ವರ್ಷಗಳ ಹಳೆಯ ದಾಖಲೆ ಉಡೀಸ್: ಅಭಿಷೇಕ್, ಪಾಂಡ್ಯ ಅಬ್ಬರ; ಜಿಂಬಾಬ್ವೆಗೆ 257 ರನ್‌ ಬೃಹತ್ ಮೊತ್ತದ ಗುರಿ ನೀಡಿದ ಭಾರತ!

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT