ದೇಶ

ಬಿಜೆಪಿ ಜೊತೆ ಕೈ ಜೋಡಿಸಿದ್ದಕ್ಕೆ ನೀರಾವರಿ ಹಗರಣದಿಂದ ಅಜಿತ್ ಪವಾರ್ ಖುಲಾಸೆ!?: ಈ ಬಗ್ಗೆ ಎಸಿಬಿ ಹೇಳಿದ್ದಿಷ್ಟು...

Srinivas Rao BV

ಮುಂಬೈ: ದೇವೇಂದ್ರ ಫಡ್ನವೀಸ್ ಜೊತೆ ಎನ್ ಸಿಪಿಯ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಸಹಕರಿಸಿದ್ದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಮುಖ್ಯ ಆರೋಪಿಯಾಗಿದ್ದ 70,000 ಕೋಟಿ ರೂಪಾಯಿ ಮೊತ್ತದ ನೀರಾವರಿ ಹಗರಣವನ್ನು ಇತ್ಯರ್ಥಗೊಳಿಸಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಈಗ ಅವೆಲ್ಲದಕ್ಕೂ ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದೆ. 

ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದಕ್ಕೂ ಈಗ ಇತ್ಯರ್ಥಗೊಳಿಸಲಾಗಿರುವ 70,000 ಕೋಟಿ ರೂಪಾಯಿ ಮೊತ್ತದ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭ್ರಷ್ಟಾಚಾರ ನಿಗ್ರಹ ದಳ ಹೇಳಿದೆ.

ಈಗ ಇತ್ಯರ್ಥಗೊಳಿಸಲಾಗಿರುವುದು ಸ್ಥಳೀಯ ರೈತರು ಹಾಗೂ ಎನ್ ಜಿಒಗಳಿಂದ ದಾಖಲಾದ ದೂರುಗಳನ್ನಷ್ಟೆ ಹೊರತು ಈಗಾಗಲೇ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾದ 20 ಎಫ್ಐಆರ್ ಗಳ ಪೈಕಿಯದ್ದಲ್ಲ ಎಂದು ಎಸಿಬಿ ಸ್ಪಷ್ಟನೆ ನೀಡಿದೆ. 

ನೀರಾವಾರಿ ಹಗರಣಕ್ಕೆ ಸಂಬಂಧಿಸಿದಂತೆ ಬೃಹತ್ ಸಂಖ್ಯೆಯಲ್ಲಿ ಎಫ್ಐಆರ್ ಗಳು ದಾಖಲಾಗಿವೆ. ಕೇವಲ ಒಂದು ಆದೇಶ ಇಡೀ ಹಗರಣದ ತನಿಖೆಯನ್ನು ಪೂರ್ಣಗೊಳಿಸುವುದಕ್ಕೆ ಸಾಧ್ಯವಿಲ್ಲ ಕೋರ್ಟ್ ಮೂಲಕವಷ್ಟೇ ನಮಗೆ  ಎಫ್ಐಆರ್ ನ್ನು ಖುಲಾಸೆಗೊಳಿಸಲು ಸಾಧ್ಯವಿರುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. 

SCROLL FOR NEXT