ಮುಂಬೈ: ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾಗಿ ಗುರುವಾ ಸಂಜೆ ಪ್ರಮಾಣ ವಚನ ಸ್ವೀಕರಿಸಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ ಮುಖವಾಣಿ “ಸಾಮ್ನಾ” ಪತ್ರಿಕೆ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ರಾವತ್ ಸಾಮ್ನಾದ ನೂತನ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡರು.
59 ವರ್ಷದ ಉದ್ಧವ್ ಠಾಕ್ರೆ, ಮನೋಹರ್ ಜೋಶಿ ಮತ್ತು ನಾರಾಯಣ ರಾಣೆ ನಂತರ ಶಿವಸೇನೆಯಿಂದ ಮಹಾರಾಷ್ಟ್ರ ಮೂರನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಠಾಕ್ರೆ ಕುಟುಂಬದಿಂದ ಉದ್ಧವ್ ಠಾಕ್ರೆ ಮೊದಲ ಮುಖ್ಯಮಂತ್ರಿಯಾಗಿದ್ದು, ಶಿವಾಜಿ ಪಾರ್ಕ್‌ನಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹಿನ್ನಲೆಯಲ್ಲಿ "ರಾಜ್ಯದಲ್ಲಿ ಸಂಭ್ರಮ ಹೇಗಿದೆ ನೋಡಿ" ಎಂದು ಶಿವಸೇನೆ ನಾಯಕ ಸಂಜಯ್ ರೌತ್ ಬಾಲಿವುಡ್ ಸಿನಿಮಾ ಸಂಭಾಷಣೆಯನ್ನು ಟ್ವೀಟ್ ಮಾಡಿದ್ದಾರೆ.