ಏನು ಬೇಕಾದರೂ ಮಾಡ್ಕೊಳಿ, ಪ್ರಗ್ಯಾ ಠಾಕೂರ್ ಭಯೋತ್ಪಾದಕಿ ಹೇಳಿಕೆಗೆ ನಾನು ಬದ್ಧ: ರಾಹುಲ್ ಗಾಂಧಿ! 
ದೇಶ

ಏನು ಬೇಕಾದರೂ ಮಾಡ್ಕೊಳಿ, ಪ್ರಗ್ಯಾ ಠಾಕೂರ್ ಭಯೋತ್ಪಾದಕಿ ಹೇಳಿಕೆಗೆ ನಾನು ಬದ್ಧ: ರಾಹುಲ್ ಗಾಂಧಿ! 

ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಭಯೋತ್ಪಾದಕಿ ಎಂಬ ಹೇಳಿಕೆಗೆ ನಾನು ಬದ್ಧ, ಈ ಸಂಬಂಧ ಯಾವುದೇ ಕ್ರಮ ಎದುರಿಸುವುದಕ್ಕೂ ಸಿದ್ಧ ಎಂದು ಐಸಿಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 

ನವದೆಹಲಿ: ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಭಯೋತ್ಪಾದಕಿ ಎಂಬ ಹೇಳಿಕೆಗೆ ನಾನು ಬದ್ಧ, ಈ ಸಂಬಂಧ ಯಾವುದೇ ಕ್ರಮ ಎದುರಿಸುವುದಕ್ಕೂ ಸಿದ್ಧ ಎಂದು ಐಸಿಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 

ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ನಾಥೂರಾಮ್ ಗೋಡ್ಸೆ ಮಾದರಿಯಲ್ಲೇ ಹಿಂಸಾಚಾರದಲ್ಲಿ ನಂಬಿಕೆ ಹೊಂದಿದ್ದಾರೆ. ಪ್ರಗ್ಯಾ ಸಿಂಗ್ ಠಾಕೂರ್ ಅವರ ಕುರಿತಾದ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ, ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ, ಅವರ ಕ್ರಮವನ್ನು ನಾನು ಸ್ವಾಗತಿಸುತ್ತೇನೆ ಎಂದು ಮಾಧ್ಯಮಗಳಿಗೆ ರಾಹುಲ್ ಗಾಂಧಿ ಹೇಳಿದ್ದಾರೆ.

ಗೋಡ್ಸೆ ದೇಶ ಭಕ್ತ ಎಂದು ಪ್ರಗ್ಯಾ ಸಿಂಗ್ ಹೇಳಿದ್ದರ ಕುರಿತ ವರದಿಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ ಪ್ರಗ್ಯಾ ಸಿಂಗ್ ನ್ನು ಭಯೋತ್ಪಾದಕಿ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT