ಸಾಂದರ್ಭಿಕ ಚಿತ್ರ 
ದೇಶ

ಅಯೋಧ್ಯೆ ತೀರ್ಪು ಬಗ್ಗೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಹೇಳಿಕೆ: ಭಾರತ ತಿರುಗೇಟು 

ದುರುದ್ದೇಶಪೂರಿತ ಸುಳ್ಳು ಪ್ರಚಾರಕ್ಕಾಗಿ ಭಾರತವನ್ನು ಬಳಸಿಕೊಳ್ಳದೆ ತನ್ನ ದೇಶದ ಅಲ್ಪಸಂಖ್ಯಾತರ ಬೆಳವಣಿಗೆಗೆ ರಚನಾತ್ಮಕವಾಗಿ ಮತ್ತು ಶಿಕ್ಷಣ ಮತ್ತು ಉದ್ಧಾರಕ್ಕಾಗಿ ಧನಾತ್ಮಕವಾಗಿ ಯೋಚಿಸುವಂತೆ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.  

ನವದೆಹಲಿ:ದುರುದ್ದೇಶಪೂರಿತ ಸುಳ್ಳು ಪ್ರಚಾರಕ್ಕಾಗಿ ಭಾರತವನ್ನು ಬಳಸಿಕೊಳ್ಳದೆ ತನ್ನ ದೇಶದ ಅಲ್ಪಸಂಖ್ಯಾತರ ಬೆಳವಣಿಗೆಗೆ ರಚನಾತ್ಮಕವಾಗಿ ಮತ್ತು ಶಿಕ್ಷಣ ಮತ್ತು ಉದ್ಧಾರಕ್ಕಾಗಿ ಧನಾತ್ಮಕವಾಗಿ ಯೋಚಿಸುವಂತೆ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. 


ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಲ್ಲಿ ಇತ್ತೀಚೆಗೆ ಅಯೋಧ್ಯೆ ಭೂವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಸಂಬಂಧಪಟ್ಟಂತೆ ಪಾಕಿಸ್ತಾನ ನೀಡಿರುವ ಹೇಳಿಕೆಗೆ ಸಂಬಂಧಪಟ್ಟಂತೆ ಭಾರತ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದೆ.


ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ, ಅಲ್ಪಸಂಖ್ಯಾತರ ವೇದಿಕೆಯ 12ನೇ ಅಧಿವೇಶನದಲ್ಲಿ ಪಾಕಿಸ್ತಾನ ಅಯೋಧ್ಯೆ ತೀರ್ಪಿನ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಭಾರತದ ರಾಯಭಾರಿ ವಿಮರ್ಶ್ ಆರ್ಯನ್, ಪಾಕಿಸ್ತಾನದ ಧಾರ್ಮಿಕ, ಜನಾಂಗೀಯ, ಪಂಥೀಯ ಮತ್ತು ಭಾಷಾ ಅಲ್ಪಸಂಖ್ಯಾತರು ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅನುಭವಿಸುತ್ತಿದ್ದಾರೆ, ಹೀಗಾಗಿ ಅವರ ಉದ್ಧಾರಕ್ಕೆ ಪಾಕಿಸ್ತಾನ ನೋಡಿಕೊಳ್ಳಲಿ ಎಂದಿದ್ದಾರೆ.


ಭಾರತ ದೃಢ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು ಸೇರಿದಂತೆ ನಮ್ಮ ಎಲ್ಲ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡಲು ಸ್ವತಂತ್ರ ಮತ್ತು ಪರಿಣಾಮಕಾರಿ ಸಾಂವಿಧಾನಿಕ ಕಾರ್ಯವಿಧಾನಗಳನ್ನು ಹೊಂದಿದೆ. ನಮ್ಮ ನ್ಯಾಯಾಂಗ ನಿರ್ಧಾರಗಳ ಬಗ್ಗೆ ಪಾಕಿಸ್ತಾನದ ಉಲ್ಲೇಖವನ್ನು ನಾವು ಒಪ್ಪುವುದಿಲ್ಲ ಎಂದರು.


ತಮ್ಮ ದೇಶದ ನಾಗರಿಕರೇ ಪ್ರಜಾಪ್ರಭುತ್ವದ ನಿಜವಾದ ಹಕ್ಕುಗಳನ್ನು ಅನುಭವಿಸದ ದೇಶದಿಂದ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಬಗ್ಗೆ ಬೇರೆ ದೇಶಗಳು ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!