ಹಲ್ಲೆಗೊಳಗಾದ ವ್ಯಕ್ತಿ 
ದೇಶ

ಅಮಾನವೀಯ ಘಟನೆ:ವಾಮಾಚಾರ ಅಭ್ಯಾಸಕ್ಕಾಗಿ ಬಲವಂತವಾಗಿ ಮಲಮೂತ್ರ ತಿನ್ನಿಸಿದ ಗ್ರಾಮಸ್ಥರು!

ವಾಮಾಚಾರ ಅಭ್ಯಾಸ ಮಾಡುತ್ತಿದ್ದಾರೆಂದು ಅನುಮಾನಿಸಿದ ಗ್ರಾಮಸ್ಥರು ಆರು ಮಂದಿಯ ಹಲ್ಲನ್ನು ಕಿತ್ತು ಬಲವಂತವಾಗಿ ಮಲಮೂತ್ರ ತಿನ್ನಿಸಿರುವ ಅಮಾನವೀಯ ಘಟನೆ ಒಡಿಶಾ ರಾಜ್ಯದ ಕಾಳಿಕೋಟೆಯ ಗೋಪಾಪುರ ಗ್ರಾಮದಲ್ಲಿ ನಡೆದಿದೆ.

ಗೋಪಾಪುರ: ವಾಮಾಚಾರ ಅಭ್ಯಾಸ ಮಾಡುತ್ತಿದ್ದಾರೆಂದು ಅನುಮಾನಿಸಿದ ಗ್ರಾಮಸ್ಥರು ಆರು ಮಂದಿಯ ಹಲ್ಲನ್ನು ಕಿತ್ತು ಬಲವಂತವಾಗಿ ಮಲಮೂತ್ರ ತಿನ್ನಿಸಿರುವ ಅಮಾನವೀಯ ಘಟನೆ ಒಡಿಶಾ ರಾಜ್ಯದ ಕಾಳಿಕೋಟೆಯ ಗೋಪಾಪುರ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಗ್ರಾಮದ 29 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಬ್ರಹ್ಮಪುರ ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ. ವಾಮಾಚಾರ ಅಭ್ಯಾಸ ಮಾಡುತ್ತಿರುವುದರಿಂದಲೇ ಗ್ರಾಮದಲ್ಲಿ ಸಾವುಗಳು ಸಂಭವಿಸುತ್ತಿವೆ ಎಂದು ಅನುಮಾನಿಸಿದ ಗ್ರಾಮದ ಗುಂಪೊಂದು ಆರು ಮಂದಿಯನ್ನು ಮನೆಯಿಂದ ಹೊರಗೆ ಎಳೆದು ತಂದಿದ್ದು, ಬಲವಂತವಾಗಿ ಮನುಷ್ಯನ ಮಲ ಮೂತ್ರವನ್ನು ತಿನ್ನಿಸಿದ್ದಾರೆ. ವಯಸ್ಸನ್ನು ಲೆಕ್ಕಿಸದೆ ಕ್ರೂರವಾಗಿ ಥಳಿಸಿದ್ದು, ಸಾರ್ವಜನಿಕರ ಎದುರಲ್ಲೇ ಅವರ ಹಲ್ಲನ್ನು ಕೀಳಲಾಗಿದೆ. 

ಈ ಘಟನೆ ಸಂಬಂಧ ಮೂರು ಪ್ರಕರಣ ದಾಖಲಿಸಲಾಗಿದ್ದು, 29 ಮಂದಿಯನ್ನು ಬಂಧಿಸಲಾಗಿದೆ. ಆರು ಮಂದಿಯ 8 ಹಲ್ಲುಗಳನ್ನು ಮುರಿಯಲಾಗಿದೆ. ಈ ಪ್ರದೇಶದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ  ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್  ರಾಯ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು