ದೇಶ

ದೆಹಲಿ-ಕತ್ರಾ 'ವಂದೇ ಭಾರತ್ ಎಕ್ಸ್'ಪ್ರೆಸ್'ಗೆ ಅಮಿತ್ ಶಾ ಚಾಲನೆ

Manjula VN

ನವದೆಹಲಿ: ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರರ ಕತ್ರಾದಲ್ಲಿ ನೆಲೆಯೂರಿರುವ ವೈಷ್ಣೋದೇವಿ ದೇವಿ ದೇವಾಲಯದವರೆಗೂ ತೆರಳುವ 'ವಂದೇ ಭಾರತ್ ಎಕ್ಸ್'ಪ್ರೆಸ್'ಗೆ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಚಾಲನೆ ನೀಡಿದ್ದಾರೆ. 

ಕೇವಲ 8 ಗಂಟೆಗಳಲ್ಲಿ 655 ಕಿ.ಮೀ ತಲುಪುವ ವಂದೇ ಭಾರತ್ ಎಕ್ಸ್'ಪ್ರೆಸ್'ಗೆ ಅಮಿತ್ ಶಾ ಅವರು ರಾಜಧಾನಿ ದೆಹಲಿಯಲ್ಲಿ ಹಸಿರು ನಿಶಾನೆ ತೋರಿದ್ದಾರೆ. 

ಬಳಿಕ ಮಾತನಾಡಿರುವ ಅಮಿತ್ ಶಾ ಅವರು, ನವರಾತ್ರಿ ವಿಶೇಷ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ಜನತೆಗೆ ಇಂತಹ ದೊಡ್ಡ ಉಡುಗೊರೆ ನೀಡಿರುವ ಭಾರತೀಯ ರೈಲ್ವೇಗೆ ನನ್ನ ಹೃದಯ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ. ಭಾರತದಲ್ಲಿ ರೈಲನ್ನು ನಿರ್ಮಾಣ ಮಾಡಿದ್ದಕ್ಕೆ ಹೆಮ್ಮೆಯಿದೆ. ತತ್ವಗಳು, ವೇಗ ಹಾಗೂ ಸೇವೆಗಳನ್ನೇ ಗುರಿಯಾಗಿರಿಸಿಕೊಂಡು ರೈಲ್ವೇ ಇಲಾಖೆ ಸಾಧನೆ ಮಾಡಿದೆ. ಸ್ಥಳೀಯ ಪ್ರವಾಸಕ್ಕೆ ಈ ಯೋಜನೆ ಸಹಾಯಕವಾಗಲಿದೆ. ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗೆ ಸ್ಥಳೀಯ ಪ್ರವಾಸ ಅತ್ಯಂತ ದೊಡ್ಡ ಪಾತ್ರವಹಿಸಲಿದೆ. ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವುದಿಲ್ಲ ಎಂಬ ಯಾವುದೇ ಗ್ರಾಮ ಭಾರತದಲ್ಲಿಲ್ಲ ಎಂದು ತಿಳಿಸಿದ್ದಾರೆ. 

ಆಗಸ್ಟ್ 15ರಂದು ಲೋಕಾರ್ಪಣೆಗೊಂಡಿದ್ದ ಈ ರೈಲು ಭಾರೀ ಜನಮನ್ನಣೆ ಗಳಿಸಿತ್ತು. ವಂದೇ ಭಾರತ್ ಎಕ್ಸ್'ಪ್ರೆಸ್ ರೈಲು ಒಟ್ಟು 16 ಬೋಗಿಗಳನ್ನು ಹೊಂದಿದ್ದು, 1128 ಆಸನಗಳನ್ನು ಹೊಂದಿದೆ. ಇದರಲ್ಲಿ 14 ಬೋಗಿಗಳು ಜನರಲ್ ಚೇರ್ ಗಳಾಗಿವೆ. ಅದರಲ್ಲಿ 936 ಆಸನಗಳಿವೆ. 

ದೆಹಲಿಯಿಂದ ಲುಧಿಯಾನದ ನಡುವೆ 130 ಕಿಮೀ ವೇಗದಲ್ಲಿ ಚಲಿಸಲು ಅನುಮತಿ ನೀಡಲಾಗಿದ್ದು. ಲುಧಿಯಾನದಿಂದ ಕತ್ರಾವರೆಗೂ ಗಂಟೆಗೆ 75 ಕಿಮೀ ವೇಗದಲ್ಲಿ ಈ ರೈಲು ಚಲಿಸಲಿದೆ. 

ಇಂಜಿನ್ ರಹಿತವಾಗ ಈ ರೈಲು ಒಟ್ಟಾರೆ 16 ಕಿಮೀ ವೇಗದಲ್ಲಿ ಸಂಚರಿಸಲಿದೆ. ಶತಾಬ್ದಿ ಎಕ್ಸ್'ಪ್ರೆಸ್ ಗಿಂತಲೂ ವಂದೇ ಭಾರತ್ ರೈಲು ಸಂಚರಿಸಲಿದೆ. ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಪ್ರತೀ ಬೋಗಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳು, ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ, ಮನರಂಜನೆಗೆ ಅಗತ್ಯವಿರುವ ವ್ಯವಸ್ಥೆಗಳು, ಮೊಬೈಲ್ ಚಾರ್ಜಿಂಗ್ ಆಯ್ಕೆಗಳೂ ಕೂಡ ಇಲ್ಲಿವೆ. 

SCROLL FOR NEXT