ದೇಶ

ಭಾರತ-ಚೀನಾ ಸಂಘರ್ಷಕ್ಕೆ ಕಾರಣವಾಗಿದ್ದ ಡೋಕ್ಲಾಂ ತಲುಪಲು ಸೇನೆಗೆ 40 ನಿಮಿಷ ಸಾಕು!

Manjula VN

ನವದೆಹಲಿ: 2 ವರ್ಷಗಳ ಹಿಂದೆ ಭಾರತ ಹಾಗೂ ಚೀನಾ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ಸಿಕ್ಕಿಂ ಬಳಿಯ ಡೋಕ್ಲಾಂ ಪ್ರದೇಶವನ್ನು ಭಾರತೀಯ ಸೇನೆ ಇನ್ನು ಮುಂದೆ 40 ನಿಮಿಷಗಳಲ್ಲಿ ತಲುಪಲಿದೆ. 

ಸಿಕ್ಕಿಂ ಬಳಿಯ ಡೋಕ್ಲಾಂ ಪ್ರದೇಶಕ್ಕೆ ವಾಹನ ಸಾಗಬಲ್ಲ ನೂತನ ರಸ್ತೆಯೊಂದರನ್ನು ಭಾರತ ನಿರ್ಮಿಸಿದ್ದು, ಇದರಿಂದಾಗಿ ಭಾರತೀಯ ಸೇನಾಪಡೆಗಳು ವಿವಾದಿತ ಡೋಕ್ಲಾಂ ಪ್ರದೇಶದ ಡೋಕಾಲಾ ಪ್ರಸ್ಥಭೂಮಿಗೆ ಸುಲಭವಾಗಿ ತೆರಳಲು ಸಾಧ್ಯವಾಗಿದೆ. ಇನ್ನು ಮುಂದೆ 40 ನಿಮಿಷಗಳಲ್ಲಿ ಸೇನಾಪಡೆಗಳು ಡೋಕ್ಲಾಂ ತಲುಪಬಹುದಾಗಿದೆ. 

ಈ ಮುನ್ನ ಕೇವಲ ಪ್ರಾಣಿಗಳು ಸಾಗಬಲ್ಲ ಕಾಲುದಾರಿಯಾಗಿದ್ದ ಹಾಗೂ ಕ್ರಮಿಸಲು ಸರಿ ಸುಮಾರು 7 ಗಂಟೆಗಳಿಗೂ ಹೆಚ್ಚು ಕಾಲ ಹಿಡಿಯುತ್ತಿದ್ದ ಈ ದಾರಿಯನ್ನು ಈಗ ಪಕ್ಕಾ ಮೋಟಾರು ವಾಹನ ರಸ್ತೆಯನ್ನಾಗಿ ಭಾರತ ಪರಿವರ್ತಿಸಿದೆ. 

ಭೀಮ್ ಬೇಸ್ ನಿಂದ ಡೋಕ್ಲಾಂಗೆ ಈ ಮಾರ್ಗ ಸಂಪರ್ಕ ಕಲ್ಪಿಸುತ್ತದೆ. 2021ರ ಮಾರ್ಚ್ ಒಳಗೆ ಫ್ಲ್ಯಾಗ್ ಹಿಲ್-ಡೋಕಾಲಾ ಮಾರ್ಗ ನಿರ್ಮಿಸಲೂ ಭಾರತ ಈಗಾಗಲೇ ಯೋಜನೆ ರೂಪಿಸಿದೆ. 

SCROLL FOR NEXT