ದೇಶ

ಮೆಟ್ರೋಗಾಗಿ ಮರಗಳ ಮಾರಣಹೋಮಕ್ಕೆ ಕೇಂದ್ರ ಪರಿಸರ ಸಚಿವರ ಸಮರ್ಥನೆ: ದೆಹಲಿ ಮೆಟ್ರೋ ಉದಾಹರಣೆ!

Srinivas Rao BV

ನವದೆಹಲಿ: ಮುಂಬೈನ ಪ್ರಮುಖ ಹಸಿರು ಪ್ರದೇಶವಾಗಿರುವ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಗಾಗಿ ಮರಗಳನ್ನು ಕಡಿಯುವುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್  ಸಮರ್ಥಿಸಿದ್ದಾರೆ. 

ಮರಗಳನ್ನು ಕಡಿಯುವುದನ್ನು ವಿರೋಧಿಸಿದ 29 ಪರಿಸರ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಈ ಬೆನ್ನಲ್ಲೇ ಪ್ರಕಾಶ್ ಜಾವ್ಡೇಕರ್ ಪ್ರತಿಕ್ರಿಯೆ ನೀಡಿದ್ದಾರೆ. 

ದೆಹಲಿಯಲ್ಲಿ ಮೊದಲ ಮೆಟ್ರೋ ನಿಲ್ದಾಣ ನಿರ್ಮಾಣವಾದಾಗ 20-25 ಮರಗಳನ್ನು ಕತ್ತರಿಸಲಾಗಿತ್ತು. ಆಗಲೂ ಜನ ಪ್ರತಿಭಟನೆ ನಡೆಸಿದ್ದರು. ಇಂದು ಅದು ವಿಶ್ವದಲ್ಲೇ ಅತ್ಯುತ್ತಮ ಮೆಟ್ರೋ ಆಗಿದೆ. ಮೆಟ್ರೋ ಅಂದು ಕತ್ತರಿಸಿದ್ದ ಒಂದೊಂದು ಮರಕ್ಕೂ ಬದಲಾಗಿ 5 ಮರಗಳನ್ನು ಬೆಳೆಸಿದೆ. ಈಗ 271 ನಿಲ್ದಾಣಗಳಿವೆ. ಇಂದು 30 ಲಕ್ಷ ಜನರು ಮೆಟ್ರೋ ಬಳಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ಎರಡೂ ಒಟ್ಟಿಗೆ ನಡೆಯಬೇಕು ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. 

ಕೆಲವು ಹಸಿರು ಕಾರ್ಯಕರ್ತರು ಈ ಪ್ರದೇಶದಲ್ಲಿ 2656 ಮರಗಳನ್ನು ಕಡಿಯುವ ಮುಂಬೈ ಮೆಟ್ರೋ ರೈಲು  ಕಾರ್ಪೊರೇಶನ್ ಲಿಮಿಟೆಡ್  ಕ್ರಮವನ್ನು ತಡೆಯಲು ಕೋರಿ ಹೊಸ ಅರ್ಜಿಯನ್ನು ಸಲ್ಲಿಸಿದ್ದರು. ಮುಂಬೈ ನಗರಾಡಳಿತವು ಮರ ಕಡಿಯಲು ಅನುಮತಿ ನೀಡಿತ್ತು.  ಮರಗಳನ್ನು ಕಡಿಯುವುದಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ಶನಿವಾರ ನಿರಾಕರಿಸಿತ್ತು.

SCROLL FOR NEXT