ದೇಶ

ಚಂದ್ರಯಾನ-2: ಆರ್ಬಿಟರ್'ನಿಂದ ಚಂದ್ರನ ಮೇಲ್ಮೈ ಕ್ಲೋಸ್ ಅಪ್ ಚಿತ್ರ ಸೆರೆ!

Manjula VN

ನವದೆಹಲಿ: ಚಂದ್ರನ ಅಂಗಳದಲ್ಲಿರುವ ಆರ್ಬಿಟರ್ ತನ್ನ ಹೈ ರೆಸಲ್ಯೂಶನ್ ಕ್ಯಾಮೆರಾದಿಂದ ಚಂದ್ರನ ಮೇಲ್ಮೈ ಚಿತ್ರಗಳನ್ನು ಸೆರೆಹಿಡಿದಿದ್ದು, ಈ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಬಿಡುಗಡೆ ಮಾಡಿದೆ. 

ಆರ್ಬಿಟರ್ ತೆಗೆದಿರುವ ಹೈ ರೆಸಲ್ಯೂಷನ್ ಚಿತ್ರಗಳನ್ನು ಇಸ್ರೋ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಒಹೆಚ್ಆರ್'ಸಿ (ಆರ್ಬಿಟರ್ ಹೈ ರೆಸಲ್ಯೂಷನ್ ಕ್ಯಾಮೆರಾ) 100 ಕಿಮೀ ಎತ್ತರದಿಂದ 25 ಸೆಂ.ಮೀ ಮತ್ತು 3 ಕಿ.ಮೀ ಎತ್ತರದಿಂದ ಪ್ರಾದೇಶಿಕ ಚಿತ್ರಗಳನ್ನು ಸೆರೆಹಿಡಿಯುವ ಹೈ ರೆಸಲ್ಯೂಷನ್ ಹೊಂದಿದ್ದು, ಚಂದ್ರನ ಆಯ್ದ ಪ್ರದೇಶಗಳ ಸ್ಥಳಾಕೃತಿ ಅಧ್ಯಯನಕ್ಕೆ ಇದು ಪ್ರಮುಖವಾಗಿದೆ ಎಂದು ಹೇಳಿದೆ. 

ಚಂದ್ರನ ಮೇಲ್ಮೈನಿಂದ 100 ಕಿ.ಮೀ ಎತ್ತರದಿಂದ ಆರ್ಬಿಟರ್ ಚಿತ್ರಗಳನ್ನು ತೆಗೆದಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ನೆಲೆಗೊಂಡಿರುವ ಬೊಗುಸ್ಲಾವ್ಸ್ಕಿ ಇ ಕುಳಿಗಳ ಭಾಗವನ್ನು ಸೆರೆ ಹಿಡಿದಿದೆ. ಇದು ಸುಮಾರು 14 ಕಿ.ಮೀ ವ್ಯಾಸ ಮತ್ತು 3 ಕಿ.ಮೀ ಆಳವನ್ನು ಅಳೆಯುತ್ತದೆ. ಇದಲ್ಲದೆ ಚಂದ್ರನ ಮೇಲ್ಮೈ ಚಿತ್ರಗಳನ್ನೂ ಆರ್ಬಿಟರ್ ಸೆರೆಹಿಡಿದಿದ್ದು, ಚಿತ್ರಗಳಲ್ಲಿ ಹಲವಾರು ಸಣ್ಣ ಕುಳಿಗಳು ಮತ್ತು ಬಂಡೆಗಳಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. 

SCROLL FOR NEXT