ದೇಶ

87ನೇ ವಾಯುಸೇನಾ ದಿನ: ಯೋಧರಿಗೆ ಪ್ರಧಾನಿ ಮೋದಿ ಕೃತಜ್ಞತೆ

Manjula VN

ನವದೆಹಲಿ: 87ನೇ ವಾಯುಸೇನಾ ದಿನ ಹಿನ್ನಲೆಯಲ್ಲಿ ವಾಯುಪಡೆಯ ಧೀರ ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ಇಡೀ ರಾಷ್ಟ್ರ ಕೃತಜ್ಞತೆ ಸಲ್ಲಿಸುತ್ತದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ವಾಯುಪಡೆ ಅತ್ಯಂತ ಸಮರ್ಪಣೆ ಹಾಗೂ ಉತ್ಕೃಷ್ಟತೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತದೆ ಎಂದು ಸ್ಮರಿಸಿದ್ದಾರೆ. 

ಇದಲ್ಲದೆ, ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ದೇಶಕ್ಕಾಗಿ ವಾಯುಸೇನೆ ಮಾಡಿರುವ ಸಾಧನೆಗಳನ್ನು ಸಾರಿದ್ದಾರೆ. ಇದೇ ವೇಳೆ ವಾಯುಸೇನಾ ಪಡೆಯ ಧೈರ್ಯ ಹಾಗೂ ಬಲವನ್ನು ಕೊಂಡಾಡಿದ್ದಾರೆ. 

ಇದರಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಕೂಡ ವಾಯುಸೇನಾ ಪಡೆಗೆ ಶುಭಾಶಯಗಳನ್ನು ಕೋರಿದ್ದಾರೆ. 

ಎಲ್ಲಾ ಭಾರತೀಯ ಸೇನಾ ಸಿಬ್ಬಂದಿಗಳು ಹಾಗೂ ವಾಯುಪಡೆಯ ಕುಟುಂಬಸ್ಥರಿಗೆ ವಾಯುಸೇನಾ ದಿನದ ಶುಭಾಶಯಗಳು. ಧೈರ್ಯ, ಕಷ್ಟಸಹಿಷ್ಣುತೆ, ನಿರ್ಣಯ ಮತ್ತು ನಿಸ್ವಾರ್ಥ ಸೇನೆಗೆ ಐಎಎಫ್ ಉದಾಹರಣೆಯಾಗಿದೆ. ನೀಲಿ ಬಣ್ಣದಲ್ಲಿರುವ ಮಹಿಳೆ ಹಾಗೂ ಪುರುಷರು ಆಗಸವನ್ನು ಸ್ಪರ್ಶಿಸುವ ಸಾಮರ್ಥ್ಯವುಳ್ಳವರಾಗಿದ್ದಾರೆಂದು ತಿಳಿಸಿದ್ದಾರೆ. 

1932 ಅ.8 ರಂದು ಭಾರತೀಯ ವಾಯುಪಡೆಯನ್ನು ಅಧಿಕೃತವಾಗಿ ಬ್ರಿಟೀಷರು ಸ್ಥಾಪಿಸಿದ್ದರು. ವಾಯುಪಡೆಗೆ ಸಿಬ್ಬಂದಿ ಮತ್ತು ವಿಮಾನ ಪೂರೈಸುವುದು ಐಎಎಫ್'ನ ಮುಖ್ಯ ಉದ್ದೇಶವಾಗಿದ್ದು. ರಾಷ್ಟ್ರದ ವಾಯುಪಡೆ 1950ರಿಂದ ನೆರೆಯ ಪಾಕಿಸ್ತಾನ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದೊಂದಿಗೆ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿದೆ. ಆಪರೇಷನ್ ವಿಜಯ್, ಆಪರೇಷನ್ ಮೇಘದೂತ್, ಆಪರೇಷನ್ ಕ್ಯಾಕ್ಟಸ್ ಮತ್ತು ಆಪರೇಷನ್ ಪೂಮಲೈ ಐಎಎಫ್ ಕೈಗೊಂಡ ಪ್ರಮುಖ ಕಾರ್ಯಾಚರಣೆಗಳಾಗಿವೆ. ಅಲ್ಲದೆ, ವಾಯುಸೇನೆ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲೂ ಭಾಗವಹಿಸುತ್ತದೆ. 

SCROLL FOR NEXT