ದೇಶ

ಪರಿಸರವಾದಿ  ಚಾಂದಿ ಪ್ರಸಾದ್ ಭಟ್ ಗೆ 'ಇಂದಿರಾ ಗಾಂಧಿ ರಾಷ್ಟ್ರೀಯ ಸಮಗ್ರತೆ ಪ್ರಶಸ್ತಿ'

Raghavendra Adiga

ನವದೆಹಲಿ:   ಪರಿಸರವಾದಿ ಮತ್ತು ಗಾಂಧಿವಾದಿ ಚಾಂದಿ ಪ್ರಸಾದ್ ಭಟ್ ಅವರನ್ನು 'ಇಂದಿರಾ ಗಾಂಧಿ ರಾಷ್ಟ್ರೀಯ ಸಮಗ್ರತೆ ಪ್ರಶಸ್ತಿ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅತ್ಯಂತ ಪ್ರಿಯವಾಗಿದ್ದ ರಾಷ್ಟ್ರೀಯ ಸಮಗ್ರತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಅವರ ಜನಮ್ ಶತಮಾನೋತ್ಸವದ ಸ್ಮರಣಾರ್ಥ ದೇಶದ ಅಭಿವೃಧ್ಧಿಗೆ ಉತ್ತಮ ಸೇವೆ ಸಲ್ಲಿಸುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. 

ಈ ಪ್ರಶಸ್ತಿ 10 ಲಕ್ಷ  ನಗದನ್ನು ಒಳಗೊಂಡಿದೆ. ಅ.31ರಂದು ದೆಹಲಿಯ ಜವಹರ್ ಭವನದಲ್ಲಿ ಪ್ರಶಸ್ತಿ ವಿತರಿಸಲಾಗುವುದು. 

ಈ ಹಿಂದೆ ಸ್ವಾಮಿ ರಂಗನಾಥಾನಂದ, ಅರುಣಾ ಅಸಫ್ ಅಲಿ,‌ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ , ಪಿ.ಎನ್. ಹಕ್ಸರ್, ಎಂ.ಎಸ್. ಸುಬ್ಬಲಕ್ಷ್ಮೀ,‌ಮತ್ತು ರಾಜೀವ್ ಗಾಂಧಿ (ಮರಣೋತ್ತರ) ಪ್ರಶಸ್ತಿ ಗೆ ಭಾಜನರಾಗಿದ್ದರು.

SCROLL FOR NEXT