ಎಂಐ-17 
ದೇಶ

ಬದ್ಗಾಮ್ ಎಂಐ-17 ಪತನದಲ್ಲಿ 6 ಯೋಧರ ಸಾವು ಪ್ರಕರಣ: 6 ಅಧಿಕಾರಗಳ ವಿರುದ್ಧ ಕ್ರಮ

ಫೆಬ್ರವರಿ 27ರಂದು ಶ್ರೀನಗರದ ಬದ್ಗಾಮ್ ನಲ್ಲಿ ಎಂಐ-17 ಕಾಪ್ಟರ್ ಪತನಗೊಂಡು ಆರು ಯೋಧರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಆರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿದೆ.

ನವದೆಹಲಿ: ಫೆಬ್ರವರಿ 27ರಂದು ಶ್ರೀನಗರದ ಬದ್ಗಾಮ್ ನಲ್ಲಿ ಎಂಐ-17 ಕಾಪ್ಟರ್ ಪತನಗೊಂಡು ಆರು ಯೋಧರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಆರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿದೆ. 

ಆರು ಅಧಿಕಾರಿಗಳ ಪೈಕಿ ಇಬ್ಬರು ಕೋರ್ಟ್ ಮಾರ್ಷಲ್ ಎದುರಿಸಬೇಕಾಗಿದೆ. ವಿಮಾನ ಪತನ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಸಾಕ್ಷ್ಯಗಳು ದೊರೆತಿರುವ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲು ಶಿಫಾರಸು ಮಾಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 

ಪುಲ್ವಾಮಾ ಯೋಧರ ನರಮೇದ ನಂತರ ಫೆಬ್ರವರಿ 26ರಂದು ಪ್ರತೀಕಾರವಾಗಿ ಪಾಕ್ ನ ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಫೆ.27ರಂದು ಬೆಳಗ್ಗೆ ಪಾಕಿಸ್ತಾನ ಮರುದಾಳಿ ನಡೆಸಲು ಮುಂದಾಗಿತ್ತು. 

ಈ ವೇಳೆ ಭಾರತೀಯ ವಾಯುಪಡೆಗೆ ಸೇರಿದ ಎಂಐ-17 ಕಾಪ್ಟರ್ ಪತನಗೊಂಡಿತ್ತು. ಪತನದ ತನಿಖೆಯಲ್ಲಿ ಪಾಕಿಸ್ತಾನದ ಕಾಪ್ಟರ್ ಎಂದು ತಪ್ಪಾಗಿ ಅಂದಾಜಿಸಿ ಭಾರತೀಯ ವಾಯುಪಡೆಯ ಯೋಧರೇ ಕ್ಷಿಪಣಿ ದಾಳಿ ನಡೆಸಿದ್ದರು ಎಂಬುದು ಬೆಳಕಿಗೆ ಬಂದಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT