ದೇಶ

ಅಯೋಧ್ಯೆ ಭೂ ವಿವಾದ: ಇಂದೇ ವಿಚಾರಣೆ ಅಂತ್ಯ, ಎಲ್ಲರ ಚಿತ್ತ 'ಸುಪ್ರೀಂ'ನತ್ತ

Srinivasamurthy VN

ನವದೆಹಲಿ: ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಇಂದು ವಿಚಾರಣೆಗೆ ಅಂತ್ಯ ಹಾಡಲಿದ್ದು, ಇದೇ ಕಾರಣಕ್ಕೆ ಇದೀಗ ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ.

ಹೌದು.. ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ಭೂವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಮುಕ್ತಾಯಗೊಳಿಸಲಿದೆ.  ಮಂಗಳವಾರ ಪ್ರಕರಣದ 39ನೇ ದಿನದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅ.16ರಂದೇ ವಿಚಾರಣೆಯ ಕೊನೆಯ ದಿನವಾಗಲಿದೆ ಎಂಬ ಸುಳಿವು ನೀಡಿದ್ದಾರೆ. ವಾದಿ, ಪ್ರತಿವಾದಿಗಳಿಗಿಬ್ಬರಿಗೂ ವಾದ ಮಂಡಿಸಲು ತಲಾ 45 ನಿಮಿಷದಂತೆ 4 ಬಾರಿ ಸಮಯ ನೀಡಲಾಗುವುದೆಂದು ಸಿಜೆಐ ಗಗೋಯ್ ತಿಳಿಸಿದ್ದಾರೆ.

ಬುಧವಾರ ಹಿಂದು ಹಾಗೂ ಮುಸ್ಲಿಂ ದಾವೆದಾರರಿಗೆ ಅಂತಿಮ ವಾದಮಂಡನೆಗೆ ಅವಕಾಶ ನೀಡಲಾಗಿದ್ದು, ಮಂಗಳವಾರ ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ ಹಿಂದು ದಾವೆದಾರರ ಪರ ವಕೀಲ ಕೆ.ಪರಾಶರನ್, ಅಯೋಧ್ಯೆಯಲ್ಲಿ ಮಸೀದಿ ಕಟ್ಟುವ ಮೂಲಕ ಮೊಘಲ್ ದೊರೆ ಬಾಬರ್ ಮಾಡಿದ್ದ ಐತಿಹಾಸಿಕ ತಪ್ಪನ್ನು ಸರಿಪಡಿಸುವ ಕಾಲ ಈಗ ಬಂದಿದೆ. ಅಯೋಧ್ಯೆಯಲ್ಲಿ ಅನೇಕ ಮಸೀದಿಗಳಿವೆ. ಮುಸ್ಲಿಮರು ಅಲ್ಲಿ ನಮಾಜ್ ಮಾಡಬಹುದು, ಆದರೆ, ರಾಮನ ಜನ್ಮಭೂಮಿ ಸ್ಥಳವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.

SCROLL FOR NEXT