ದೇಶ

ಮನೆ ಅತಿಕ್ರಮಣ ಪ್ರಕರಣ: ದೆಹಲಿ ಸ್ಪೀಕರ್‌ಗೆ 6 ತಿಂಗಳ ಜೈಲುಶಿಕ್ಷೆ

Raghavendra Adiga

ನವದೆಹಲಿ: 2015ರ ಪ್ರಕರಣವೊಂದಕ್ಕೆ ಸಂಬಂಧಿಸಿ ದೆಹಲಿ ವಿಧಾನಸಭೆ ಸಭಾಧ್ಯಕ್ಷ (ಸ್ಪೀಕರ್) ರಾಮ್ ನಿವಾಸ್ ಗೋಯೆಲ್ ಅವರಿಗೆ ದೆಹಲಿ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪಿತ್ತಿದೆ.

2015 ರಲ್ಲಿ ಪೂರ್ವ ದೆಹಲಿ ಕಾಲೋನಿಒಯ ಪ್ರದೇಶದಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿಯ ಮನೆ ಮೇಲೆ ಅತಿಕ್ರಮಣ ನಡೆಸಿದ್ದ ಆರೋಪದಲ್ಲಿ ಗೋಯಲ್ ಅವರಿಉಗೆ ಶಿಕ್ಷೆ ವಿಧಿಸಲಾಗಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ಈ ಸಂಬಂಧ ತೀರ್ಪು ನೀಡಿದ್ದು ರಾಮ್ ನಿವಾಸ್ ಗೋಯೆಲ್, ಸುಮಿತ್ ಗೋಯಲ್, ಹಿತೇಶ್ ಖನ್ನಾ, ಅತುಲ್ ಗುಪ್ತಾ ಮತ್ತು ಬಲ್ಬೀರ್ ಸಿಂಗ್ ಅವರುಗಳನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ಇಲ್ಲಿ ಸ್ಪೀಕರ್ ಗೋಯಲ್ ಅವರಿಗೆ ಆರು ತಿಂಗಳ ಸಾಮಾನ್ಯ ಜೈಉಲುವಾಸ ಹಾಗೂ 1,000 ರು. ದಂಡವನ್ನು ಹಾಕಲಾಗಿದೆ.

ಆದರೆ ನ್ಯಾಯಾಲಯವು ಅವರಿಗೆ  1,00,000 ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿದ್ದು ಅವರ ಅಪರಾಧ ಮತ್ತು ಜೈಲು ಶಿಕ್ಷೆಯ ಆದೇಶದ ವಿರುದ್ಧ ಉನ್ನತ ನ್ಯಾಯಾಲಯಗಳ ಮುಂದೆ ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಟ್ಟಿದೆ.ಭಾರತೀಯ ದಂಡ ಸಂಹಿತೆಯ ಸೆಕ್ಷನ್ 448 (ಮನೆ ಅತಿಕ್ರಮಣ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ನ್ಯಾಯಾಲಯವು ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. 72 ವರ್ಷದ ಗೋಯೆಲ್ ಪರ ವಕೀಲ ಎಂಡಿ ಇರ್ಷಾದ್ ತಮ್ಮ ಕಕ್ಷಿದಾರರ ವಿರುದ್ಧದ ಆರೋಪವನ್ನು ನಿರಾಕರಿಸಿದ್ದರು.

ಬಿಲ್ಡರ್ ಮನೀಶ್ ಘಾಯ್ ಅವರ ದೂರಿನ ಮೇರೆಗೆ ನೋಂದಾಯಿಸಲಾದ  ಎಫ್.ಐ.ಆರ್. ವರದಿಯ ಅನುಸಾರ  ದೆಹಲಿ ವಿಧಾನಸಭಾ ಚುನಾವಣೆಗೆ ಒಂದು ದಿನ ಮೊದಲು, ಫೆಬ್ರವರಿ 6, 2015 ರ ರಾತ್ರಿ ಗೋಯೆಲ್ ಮತ್ತು ಅವರ ಬೆಂಬಲಿಗರು ವಿವೇಕ್ ವಿಹಾರನಲ್ಲಿರುವ ಘಾಯ್ ಅವರ ಮನೆಯೊಂದರ ಮೇಲೆ ದಾಳಿ ಮಾಡಿದ್ದರು. ಮತದಾನಕ್ಕೆ ಮುಂಚಿತವಾಗಿ  ಮತದಾರರಿಗೆ ವಿತರಿಸಲು ಮದ್ಯ, ಕಂಬಳಿ ಮತ್ತು ಇತರ ವಸ್ತುಗಳನ್ನು ಘಾಯ್ ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿ ಗೋಯೆಲ್ ಈ ದಾಳಿ ನಡೆಸಿದರೆಂದು ಎಫ್ಐಆರ್ ಹೇಳಿದೆ.

SCROLL FOR NEXT