ಸಂಗ್ರಹ ಚಿತ್ರ 
ದೇಶ

ಉತ್ತರ ಪ್ರದೇಶ: ಪ್ರೇಯಸಿಯೊಡನೆ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆ, ಟಿವಿ ನಿರೂಪಕನ ಬಂಧನ

ಪತ್ನಿಯನ್ನು ಕೊಂದ ಆರೋಪದಡಿ ಟಿವಿ ನಿರೂಪಕನೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಇಟವಾ ಜಿಲ್ಲೆಯಲ್ಲಿ ನಡೆದಿದೆ.

ಪತ್ನಿಯನ್ನು ಕೊಂದ ಆರೋಪದಡಿ ಟಿವಿ ನಿರೂಪಕನೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಇಟವಾ ಜಿಲ್ಲೆಯಲ್ಲಿ ನಡೆದಿದೆ.

ನಿರೂಪಕ ಅಜಿತೇಶ್ ಮಿಶ್ರಾ ಅವರ ಪತ್ನಿ ದಿವ್ಯಾ ಸಾವನ್ನಪ್ಪಿದ ಮಹಿಳೆಯಾಗಿದ್ದು  ಸೋಮವಾರ ಇಟವಾದ  ಕತ್ರಾ ಬಾಲ್ ಸಿಂಗ್ ಪ್ರದೇಶದಲ್ಲಿರುವ ಆವರ ನಿವಾಸದಲ್ಲಿ ಶವ ಪತ್ತೆಯಾಗಿದೆ. ಪ್ರಕರಣದಲ್ಲಿ ಅಜಿತೇಶ್ ಅವರಲ್ಲದೆ ಆತನ ಪ್ರೇಮಿ ದೆಹಲಿಯ ಭಾವನಾ ಆರ್ಯ ಮತ್ತು ಫರಿದಾಬಾದ್ ಮೂಲದ ಸ್ನೇಹಿತ ಅಖಿಲ್ ಕುಮಾರ್ ಸಿಂಗ್ ಸಹ ಬಂಧಿಸಲ್ಪಟ್ಟಿದ್ದಾರೆ. ಈ ಮೂವರೂ ದೆಹಲಿ ಮೂಲದ ಟಿವಿ ಚಾನಲ್ ವೊಂದರಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು.

ಅಜಿತೇಶ್ ಹಾಗೂ ಗೆಳತಿ ಭಾವನಾ ನಡುವೆ ಅನಿತಿಕ ಸಂಬಂಧವಿದ್ದು ಇದು ಅವನ ಪತ್ನಿ ದಿವ್ಯಾಗೆ ತಿಳಿದ ನಂತರ ಪತಿ ಪತ್ನಿಯರಲ್ಲಿ ಆಗಾಗ ಜಗಳವಾಗುತ್ತಿತ್ತು. ಅದೊಮ್ಮೆ ದಿವ್ಯಾ ಭಾವನಾ ಜತೆ ಫೋನ್ ಮೂಲಕ ಸಂಪರ್ಕಿಸಿ ಹೀಯಾಳಿಸಿದ ಬಳಿಕ ಗಂಡ ಹೆಂಡತಿ ನಡುವಿನ ಸಂಬಂಧ ಬಿರುಕು ಬಿಟ್ಟಿದೆ.  ಇದರಿಂದ ಕ್ರುದ್ದಗೊಂಡ ಅಜಿತೇಶ್ ತನ್ನ ಸ್ನೇಹಿತನೊಡನೆ ಸೇರಿ ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದನೆ. ಅದರಂತೆ ಅಖಿಲ್ ಅಕ್ಟೋಬರ್ 14 ರಂದು ಅಜಿತೇಶ್ ಅವರ ನಿವಾಸವನ್ನು ತಲುಪಿದರು ಎಂದು ಎಸ್‌ಎಸ್‌ಪಿ ಸಂತೋಷ್ ಕುಮಾರ್ ಮಿಶ್ರಾ ಹೇಳಿದ್ದಾರೆ.

ದಿವ್ಯಾ ರಕ್ತಸ್ರಾವವಾಗಿ ನರಳಿ ಸಾಯುವವರೆಗೂ ಅಖಿಲ್ ಆಕೆಯ ಮ್ಲೆ ಹೂವಿನ ಕುಂಡದಿಂದ ಹಲ್ಲೆ ಮಾಡಿದ್ದಾನೆ. ಬಳಿಕ ತಾನು ಆ ಸ್ಥಳದಿಂದ ಪರಾರಿಯಾಗಿದ್ದಾನೆ. 

ದಿವ್ಯಾ ಮಾವ ಮೋದ್ ಮಿಶ್ರಾ ಅವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಅದೇ ದಿನ ಪ್ರಕರಣ ದಾಖಲಾಗಿದ್ದು, ವಿಧಿವಿಜ್ಞಾನ ತಜ್ಞರು ಮತ್ತು ಶ್ವಾನ ದಳದ ಸಹಾಯದಿಂದ ತನಿಖೆ ನಡೆಸಿದಾಗ ನೈಜ ಆರೋಪಿಗಳು ಪತ್ತೆಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT