ಸಂಗ್ರಹ ಚಿತ್ರ 
ದೇಶ

ಹೃದಯ ಶಸ್ತ್ರಚಿಕಿತ್ಸೆಗೆ ಹಣದ ಕೊರತೆ, ಮತ್ತೋರ್ವ ಪಿಎಂಸಿ ಬ್ಯಾಂಕ್ ಠೇವಣಿದಾರನ ಸಾವು

ಭಾರತೀಯ ರಿಸರ್ವ್ ಬ್ಯಾಂಕ್ ನ ಕೆಂಗಣ್ಣಿಗೆ ಗುರಿಯಾಗಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ (ಪಿಎಂಸಿ ಬ್ಯಾಂಕ್) ಹಗರಣದ ತನಿಖೆ ಜಾರಿಯಲ್ಲಿರುವಂತೆಯೇ ಇಲ್ಲಿ ಠೇವಣಿ ಇಟ್ಟಿದ್ದ ಮತ್ತೋರ್ವ ಖಾತೆದಾರ ಸಾವನ್ನಪ್ಪಿದ್ದಾನೆ.

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ನ ಕೆಂಗಣ್ಣಿಗೆ ಗುರಿಯಾಗಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ (ಪಿಎಂಸಿ ಬ್ಯಾಂಕ್) ಹಗರಣದ ತನಿಖೆ ಜಾರಿಯಲ್ಲಿರುವಂತೆಯೇ ಇಲ್ಲಿ ಠೇವಣಿ ಇಟ್ಟಿದ್ದ ಮತ್ತೋರ್ವ ಖಾತೆದಾರ ಸಾವನ್ನಪ್ಪಿದ್ದಾನೆ.

ಹೌದು.. ಸುಮಾರು 83 ವರ್ಷದ ಮುರಳಿ ಧರ್ರ ಎಂಬ ಪಿಎಂಸಿ ಬ್ಯಾಂಕ್ ಖಾತೆದಾರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಪಿಎಂಸಿ ಬ್ಯಾಂಕ್ ನಲ್ಲಿ ಅವರು ಸುಮಾರು 80 ಲಕ್ಷ ರೂಗಳನ್ನು ಠೇವಣಿ ಇಟ್ಟಿದ್ದರು. ಆದರೆ ಇತ್ತೀಚೆಗೆ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದರು. ಆದರೆ ಶಸ್ತ್ರಚಿಕಿತ್ಸೆಗೆ ಹಣ ಕಟ್ಟಲಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮುರಳಿ ಧರ್ರ್ ಅವರು ಪಿಎಂಸಿ ಖಾತೆಯಲ್ಲಿ ಸುಮಾರು 80 ಲಕ್ಷ ಹಣವನ್ನು ಠೇವಣಿ ಇಟ್ಟಿದ್ದರು ಎಂದು ಅವರ ಮಗ ಪ್ರೇಮ್ ಧರ್ರ್ ಮಾಹಿತಿ ನೀಡಿದ್ದಾರೆ. 

ಕಳೆದ ಸೆಪ್ಟೆಂಬರ್ ನಿಂದ ಆರ್ ಬಿಐ ಪಿಎಂಸಿ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ್ದು, ಹಣ ಹಿಂತೆಗೆತದ ಮೇಲೂ ನಿರ್ಬಂಧ ಹೇರಿತ್ತು. ಈ ಬೆಳವಣಿಗೆಯಿಂದಾಗಿ ಕಂಗಾಲದ ಖಾತೆದಾರರು ತಮ್ಮ ಹಣ ಹಿಂತೆಗೆದುಕೊಳ್ಳಲು ಮುಂದಾದರು. ಆದರೆ ಈ ಪೈಕಿ ಹಣ ಹಿಂತೆಗೆಯಲಾಗದ ಓರ್ವ ಖಾತೆದಾರರು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೆ ಇಬ್ಬರು ಖಾತೆದಾರರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇದೀಗ ಮತ್ತೋರ್ವ ಖಾತೆದಾರ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿದಂತಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್ ಸಂಘರ್ಷದ ನಡುವೆಯೂ ಭಾರತದ GDP ಶೇ.7.8ರಷ್ಟು ಬೆಳವಣಿಗೆ: ಪ್ರಧಾನಿ ಮೋದಿ ಮೆಚ್ಚುಗೆ!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ರೂಪಿಕಾ; 'ಚೆಲುವಿನ ಚಿಲಿಪಿಲಿ' ಮನಗೆದ್ದ ಹುಡುಗ ಯಾರು?

ಐದು ವರ್ಷದ ಬಳಿಕ RCB ಸ್ಟಾರ್ ಆಟಗಾರನಿಗೆ ಗುಡ್ ನ್ಯೂಸ್; ಮತ್ತೆ ಟೀಂ ಇಂಡಿಯಾಗೆ ಕೃನಾಲ್ ಪಾಂಡ್ಯ ಎಂಟ್ರಿ?

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಇರಾನ್ ಅಧ್ಯಕ್ಷ-ಮೋದಿ ಮಹತ್ವದ ಭೇಟಿ

ಪಾಕ್ ನಲ್ಲಿ ಮತ್ತೆ 'ಧುರಂದರ್' ಸ್ಟೈಲ್ ಕಿಲ್ಲಿಂಗ್? ಜೈಶ್ ಉಗ್ರ Lakhvi ಸಂಬಂಧಿ ತಲೆಗೆ ಗುಂಡಿಕ್ಕಿದ 'ಅನಾಮಿಕ' ಗನ್‌ಮ್ಯಾನ್‌! Video