ದೇಶ

ಆರ್ಥಿಕತೆಯನ್ನು ಸುಧಾರಿಸಿ, 'ಕಾಮಿಡಿ ಸರ್ಕಸ್' ನಡೆಸುವುದನ್ನು ಬಿಡಿ: ಪ್ರಿಯಾಂಕಾ ಗಾಂಧಿ

Raghavendra Adiga

ನವದೆಹಲಿ: ಸರ್ಕಾರ ತಕ್ಷಣವೇ ಕುಸಿಯುತ್ತಿರುವ ಆರ್ಥಿಕತೆಯನ್ನು ಸುಧಾರಿಸುವ ಕ್ರಮದ ಕುರಿತು ಯೋಚಿಸಬೇಕು. ಅದನ್ನು ಬಿಟ್ಟು "ಕಾಮಿಡಿ ಸರ್ಕಸ್" ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. 

ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೆ ಬಗ್ಗೆ ಮಾತನಾಡಿದ ಪ್ರಿಯಾಂಕಾ "ರ್ಕಾರದ ಕೆಲಸವು "ಕುಸಿಯುತ್ತಿರುವ" ಆರ್ಥಿಕತೆಯನ್ನು ಸುಧಾರಿಸುವುದೇ ಹೊರತು "ಕಾಮಿಡಿ ಸರ್ಕಸ್"  ನಡೆಸುವುದಲ್ಲ" ಎಂದರು.

ಕಾಂಗ್ರೆಸ್ ಪ್ರಸ್ತಾಪಿಸಿದ ಕನಿಷ್ಠ ಆದಾಯ ಯೋಜನೆಯಾದ 'ನ್ಯಾಯ್' ಅನ್ನು ಬ್ಯಾನರ್ಜಿ ಬೆಂಬಲಿಸಿದ್ದಾರೆ ಎಂದು ಗೋಯಲ್ ಶುಕ್ರವಾರ ಹೇಳಿದ್ದಲ್ಲದೆ ಅದನ್ನು ಭಾರತೀಯ ಮತದಾರರು ತಿರಸ್ಕರಿಸಿದರು, ಹಾಗಾಗಿ ಅವರ ಆಲೋಚನೆಗಳನ್ನು ಸ್ವೀಕರಿಸುವ ಅಗತ್ಯವಿಲ್ಲ ಎಂದಿದರು.

ಏಪ್ರಿಲ್-ಮೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳಲ್ಲಿ "ನ್ಯಾಯ್" ಯೋಜನೆ ಒಂದಾಗಿತ್ತು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ಪುಣೆಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ, ಬ್ಯಾನರ್ಜಿಯನ್ನು "ಎಡಪಂಥೀಯ" ಎಂದು ಕರೆದಿದ್ದರು.ಗೋಯಲ್ ಹೇಳಿಕೆಯನ್ನು ಟೀಕಿಸುತ್ತಾ  ಪ್ರಿಯಾಂಕಾ ಗಾಂಧಿ ತಮ್ಮ ಕೆಲಸವನ್ನು ಮಾಡುವ ಬದಲು, ಬಿಜೆಪಿ ನಾಯಕರು ಇತರರ ಸಾಧನೆಗಳನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದರು.ಬ್ಯಾನರ್ಜಿ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ.ಹಾಗಾಗಿ ಅವರಿಗೆ ನೊಬೆಲ್ ಗೌರವ ಸಂದಿದೆ ಎಂದು ಪ್ರಿಯಾಂಕಾ ತಮ್ಮ ಟ್ವೀಟ್ ಮೂಲಕ ಹ್ಳಿದ್ದಾರೆ.

"ದೇಶದಲ್ಲಿ ಆರ್ಥಿಕತೆ ಕುಸಿಯುತ್ತಿದೆ. ನಿಮ್ಮ ಕೆಲಸ ಅದನ್ನು ಸುಧಾರಿಸುವುದು" ಎಂದ ಪ್ರಿಯಾಂಕಾ ಸೆಪ್ಟೆಂಬರ್‌ನಲ್ಲಿ ವಾಹನ ಕ್ಷೇತ್ರದ ವ್ಯವಹಾರ ಮಂದಗತಿ ಮುಂದುವರಿದಿದೆಎಂದು ಹೇಳುವ ಮಾಧ್ಯಮ ವರದಿಯನ್ನು ಟ್ವಿಟ್ ಗೆ ಟ್ಯಾಗ್ ಮಾಡಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಿರುವ ಭಾರತೀಯ-ಅಮೆರಿಕನ್ ಬ್ಯಾನರ್ಜಿ ಅವರಿಗೆ 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಲಭಿಸಿದೆ.

SCROLL FOR NEXT