ದೇಶ

ಸಂಸ್ಕರಿತ ಹಾಲೂ ಕೂಡ ಗುಣಮಟ್ಟದಲ್ಲಿ ಫೇಲ್!

Manjula VN

ಶೇ.37.7ರಷ್ಟು ಹಾಲಿನ ಮಾದರಿ ಸೂಚಿತ ಗುಣಮಟ್ಟದಲ್ಲಿಲ್ಲ: ಭಾರತೀಯ ಆಹಾರ ಸುರಕ್ಷಿತಾ ಪ್ರಾಧಿಕಾರ


ನವದೆಹಲಿ: ಪ್ರಮುಖ ಬ್ರ್ಯಾಂಡುಗಳು ಸೇರಿದಂತೆ ಸಂಸ್ಕರಿತ ಹಾಲಿನ ಮಾದರಿಗಳು ಸೂಚಿತ ಮಾದರಿಗಳು ಗುಣಮಟ್ಟವನ್ನು ಹೊಂದಿಲ್ಲ ಎಂಬ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. 

ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ನಡೆಸಿದ ಅಧ್ಯಯನದಲ್ಲಿ ಈ ಅಂಶ ತಿಳಿದುಬಂದಿದೆ. 

ಎಫ್ಎಸ್ಎಸ್ಎಐ 2018ರ ಮೇ ಮತ್ತು ಅಕ್ಟೋಬರ್ ಅವಧಿಯಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಸಗಳ 1,103 ನಗರ ಮತ್ತು ಪಟ್ಟಣಗಳಿಂದ ಸಂಸ್ಕರಿತ ಮತ್ತು ಕಚ್ಚಾ ಹಾಲಿನ 6,432 ಮಾದರಿ ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸಿತ್ತು. ಸಂಸ್ಕರಿಸಿದ ಹಾಲಿನ ಮಾದರಿಗಳ ಪೈಕಿ ಶೇ.37.7ರಷ್ಟು ಹಾಲಿನ ಮಾದರಿಗಳು ಸೂಚಿತ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವುದು ಕಂಡು ಬಂದಿದೆ. 

ಸುರಕ್ಷತೆ ಮಾನದಂಡವನ್ನು ಅನುಸರಿಸುವಲ್ಲಿಯೂ ಶೇ.10.4ರಷ್ಟು (2,607 ಮಾದರಿಗಳು)ಸಂಸ್ಕರಿಸಿದ ಹಾಲಿನ ಮಾದರಿಗಳು ವಿಫಲವಾಗಿವೆ. ಇವುಗಳಲ್ಲಿ ಆಫ್ಲಾಟಾಕ್ಸಿನ್ ಎಂ-1, ಪ್ರತಿ ಜೀವಕಗಳು ಮತ್ತು ಕೀಟನಾಶಕಗಳು ಕಂಡು ಬಂದಿವೆ. ಸಂಸ್ಕರಿಸಿದ ಹಾಲಿನ ಕಲಬೆರಕೆಗಿಂತಲೂ, ಕಲ್ಮಶಲೀಖರಣ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಆದರೆ, ಕೇವಲ 12 ಮಾದರಿಗಳು ಮಾತ್ರ ಕಲಬೆರಕೆಯಾಗಿರುವುದು ಕಂಡು ಬಂದಿದೆ. 

ಹೆಚ್ಚಿನ ಕಲಬೆರಕೆ ಹಾಲಿನ ಮಾದರಿಗಳು ತೆಲಂಗಾಣದಲ್ಲಿ ಕಂಡು ಬಂದಿದ್ದು, ನಂತರದಲ್ಲಿ ಮಧ್ಯಪ್ರದೇಶ ಮತ್ತು ಕೇರಳ ರಾಜ್ಯಗಳಿವೆ. ಸಕ್ಕರೆ ಮತ್ತು ಕೊಬ್ಬಿನ ಅಂಶ ಅಧಿಕವಾಗಿರುವ ಕಾರಣ ಸಂಸ್ಕರಿಸಿದ ಹಾಲು ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಎಫ್ಎಸ್ಎಸ್ಎಐ ವರದಿಯಲ್ಲಿ ತಿಳಿಸಿದೆ.

SCROLL FOR NEXT