ದೇಶ

ತುರ್ತು ಆರ್ಥಿಕ ಬದಲಾವಣೆಗಳಿಗೆ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಒತ್ತಾಯ

Srinivas Rao BV

ನವದೆಹಲಿ: ಭಾರತದ ಬ್ಯಾಂಕಿಂಗ್ ಬಿಕ್ಕಟ್ಟಿನ ಬಗ್ಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಆತಂಕ ವ್ಯಕ್ತಪಡಿಸಿದ್ದು, ಆರ್ಥಿಕ ಕ್ಷೇತ್ರಗಳಲ್ಲಿ ತುರ್ತು ಬದಲಾವಣೆಗಳಿಗೆ ಒತ್ತಾಯಿಸಿದ್ದಾರೆ. 

ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ತುರ್ತು ಬದಲಾವಣೆಗಳು ಅಗತ್ಯ ಎಂದು ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. ಅ.22 ರಂದು ಅವರು ನವದೆಹಲಿಯಲ್ಲಿ ಮಾಧ್ಯಮ ಸಂವಾದಲ್ಲಿ ಭಾಗವಹಿಸಿ ಮಾತನಾಡಿದರು.
  
ಬ್ಯಾಂಕ್ ಗಳಲ್ಲಿ ಸರ್ಕಾರಿ ಪಾಲನ್ನು ಶೇ.50 ರಷ್ಟಕ್ಕಿಂತ ಕಡಿಮೆ ಮಾಡಬೇಕು, ಈ ಮೂಲಕ ಬ್ಯಾಂಕ್ ಗಳು ಕೇಂದ್ರ ವಿಜಿಲೆನ್ಸ್ ಆಯೋಗದ ಆತಂಕ ಇಲ್ಲದೇ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂದು ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ. 

SCROLL FOR NEXT