ಪಿಎಂಸಿ ಬ್ಯಾಂಕ್ 
ದೇಶ

ಪಿಎಮ್‌ಸಿ ಹಗರಣ: ಎಚ್‌ಡಿಐಎಲ್‌ನ ತಂದೆ-ಮಗ ಜೋಡಿಯ ಕಸ್ಟಡಿ ವಿಸ್ತರಣೆ, ಇನ್ನೊಬ್ಬ ಠೇವಣಿದಾರರಿಗೆ ಹೃದಯಾಘಾತ

4,355 ಕೋಟಿ ರೂ. ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಮ್‌ಸಿ)  ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಹೌಸಿಂಗ್ ಡೆವಲಪ್‌ಮೆಂಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ (ಎಚ್‌ಡಿಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ವಾಧವನ್ ಮತ್ತು ಅವರ ಪುತ್ರ....

ಮುಂಬೈ:  4,355 ಕೋಟಿ ರೂ. ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಮ್‌ಸಿ)  ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಹೌಸಿಂಗ್ ಡೆವಲಪ್‌ಮೆಂಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ (ಎಚ್‌ಡಿಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ವಾಧವನ್ ಮತ್ತು ಅವರ ಪುತ್ರ ಸಾರಂಗ್ ವಾಧವನ್ ಬಂಧನ ಅವಧಿಯನ್ನು ಅಕ್ಟೋಬರ್ 24 ರವರೆಗೆ. ವಿಸ್ತರಿಸಿ  ಜಾರಿ ನಿರ್ದೇಶನಾಲಯ (ಇಡಿ) ಆದೇಶಿಸಿದೆ. ಏತನ್ಮಧ್ಯೆ ಪಿಎಂಸಿ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ  ಮುಂಬೈ ಮೂಲದ ಮಗಳ ಜೊತೆ ಮಾತನಾಡಿದ ನಂತರ 73 ವರ್ಷದ ಮಹಿಳೆ ಸೋಲಾಪುರದಲ್ಲಿ ಹೃದಯ ಸ್ತಂಭನದಿಂದಾಗಿ ನಿಧನರಾದರು. ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಕಳೆದ ವಾರದಿಂದ ಇದು ಐದನೇ ಸಾವಿನ ಪ್ರಕರಣವಾಗಿದೆ.

ರಾಕೇಶ್ ವಾಧವನ್ ಮತ್ತು ಅವರ ಪುತ್ರ ಸಾರಂಗ್ ವಾಧವನ್ ಅವರ ಬಂಧನ ಅವಧಿ ಮಂಗಳವಾರ ಮುಗಿದ ಹಿನ್ನೆಲೆಯಲ್ಲಿ ವಿಶೇಷ ಮನಿ ಲಾಂಡರಿಂಗ್ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯದ ನ್ಯಾಯಾಧೀಶ ಪಿ.ರಾಜ್ವೈದ್ಯ ಅವರ ಮುಂದೆ ಇಡಿ ಆರೋಪಿಗಳನ್ನು ಹಾಜರುಪಡಿಸಿದೆ.ಅಪಾರ ಪ್ರಮಾಣದ ಹಣವನ್ನು ಲಾಂಡರಿಂಗ್ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರಿಂದ ಮತ್ತು ತನಿಖೆಯಿಂದ ಮಹತ್ವದ ದಾಖಲೆಗಳನ್ನು ಮರೆಮಾಚಿದ್ದರಿಂದ ಇನ್ನಷ್ಟು ವಿಚಾರಣೆ ಅಗತ್ಯವಿದೆ ಎಂದು ಇಡಿ ಇದೇ ವೇಳೆ ನ್ಯಾಯಾಲಯಕ್ಕೆ ಹೇಳೀದೆ.

ಇಡಿ ವಾದ ಆಲಿಸಿದ ನ್ಯಾಯಾಲಯ ಇವರಿಬ್ಬರ ಬಂಧನ ಅವಧಿಯನ್ನು ಗುರುವಾರದವರೆಗೆ ವಿಸ್ತರಿಸಿತು

ಏತನ್ಮಧ್ಯೆ, ಪಿಎಂಸಿ ಬ್ಯಾಂಕಿನಲ್ಲಿ ಸುಮಾರು 2.25 ಕೋಟಿ ರೂ. ಹೊಂದಿದ್ದ ಮಹಿಳೆ ತನ್ನ ಮಗಳೊಂದಿಗೆ ಮಾತನಾಡಿದ ನಂತ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಸೋಲಾಪುರದ ಭಾರತಿ ಸದರಂಗಣಿ (73) ಭಾನುವಾರ ಮಧ್ಯಾಹ್ನ ಸಾವಿಗೀಡಾಗಿದ್ದಾರೆ. “ನನ್ನ ಹೆಂಡತಿ ಮತ್ತು ನಾನು ಪಿಎಂಸಿ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿದ್ದೇವೆ. ನಮ್ಮ ಜೀವನದ ಎಲ್ಲಾ ಉಳಿತಾಯವೆಲ್ಲವೂ ಇದೆ ಬ್ಯಾಂಕಿನಲ್ಲಿದೆ.ನನ್ನ ಹೆಂಡತಿ ಹೇಮಾ ತನ್ನ ತಾಯಿಯೊಂದಿಗೆ ತನ್ನ ಚಿಂತೆಗಳನ್ನು ತೋಡಿಕೊಂಡಿದ್ದಳು." ಎಂ.ಎಸ್.ಸದರಂಗಣಿಯವರ ಅಳಿಯ ಚಂದನ್ ಚೋತ್ರಾನಿ ಹೇಳಿದ್ದಾರೆ.

"ನಮ್ಮ ಅತ್ತೆಗೆ ಹೃದಯ ಸಂಬಂಧಿ ಕಾಯಿಲೆಗಳಿರಲಿಲ್ಲ, ಆಕೆ ಆರೋಗ್ಯವಾಗಿದ್ದರು.  ಈ ರೀತಿಯ ಏನಾದರೂ ಸಂಭವಿಸಬಹುದು ಎಂಬುದಕ್ಕೆ ಯಾವುದೇ ಸೂಚನೆಯೂ ಇರಲಿಲ್ಲ, ತಾಯಿಯನ್ನು ಕಳೆದುಕೊಂಡ ನನ್ನ ಪತ್ನಿ ತೀವ್ರ ಆಘಾತಕ್ಕೆ ಒಳಗಾಗಿದ್ದಾಳೆ"

ಇದಕ್ಕೆ ಮೊದಲು 80 ವರ್ಷದ ಮುರಳೀಧರ್ ದರ್ರಾ,  ಫಟ್ಟೋಮಲ್ ಪಂಜಾಬಿ (59), ನಿವೇದಿತಾ ಬಿಜ್ಲಾನಿ (39) ಸಹ ಹೃದಯಾಘಾತದಿಂಡ ನಿಧನರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT