ದೇಶ

ಶಿವಸೇನೆ ಬೆಂಬಲವಿಲ್ಲದೆ ಬಿಜೆಪಿ ಸರ್ಕಾರ ರಚನೆ ಅಸಾಧ್ಯ!

Srinivasamurthy VN

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಬೆಂಬಲವಿಲ್ಲದೇ ಬಿಜೆಪಿ ಸರ್ಕಾರ ರಚನೆ ಅಸಾಧ್ಯ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಕಳೆದವಾರ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ ಮತ್ತೆ ಅಧಿಕಾರದ ರಚನೆಯ ಕನಸು ಕಾಣುತ್ತಿದೆ. ಏತ್ಮನ್ಮಧ್ಯೆ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು, ಮಹಾರಾಷ್ಟ್ರದಲ್ಲಿ ಶಿವಸೇನೆ ತಾನು ಸ್ಪರ್ಧೆ ಮಾಡಿರುವ 124 ಕ್ಷೇತ್ರಗಳ ಪೈಕಿ ಕನಿಷ್ಠ 100 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಲಿ ಚುನಾವಣೆಯಲ್ಲಿ ಶಿವಸೇನೆ 4 ರಿಂದ 5 ಸ್ಥಾನ ಗೆದ್ದರೂ ಬಿಜೆಪಿ ಏಕಾಂಗಿಯಾಗಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಶಿವಸೇನೆ ಬೆಂಬಲ ಅತ್ಯಗತ್ಯ. 2014ರಲ್ಲಿ ಶಿವಸೇನೆ ಮೈತ್ರಿ ಇಲ್ಲದೆಯೇ 62 ಕ್ಷೇತ್ರಗಳಲ್ಲಿ ಗೆದ್ದಿತ್ತು. ಬಿಜೆಪಿ 122 ಗೆದ್ದಿತ್ತು. ಬಿಜೆಪಿಯನ್ನು ಶಿವಸೇನೆ ತನ್ನ ದೊಡ್ಡಣ್ಣನಂತೆ ನೋಡುತ್ತದೆ. ಹೀಗಾಗಿ ಶಿವಸೇನೆ ಬೆಂಬಲವಿಲ್ಲದೇ ಬಿಜೆಪಿಯಿಂದ ಸರ್ಕಾರ ರಚನೆ ಅಸಾಧ್ಯ ಎಂದು ಹೇಳಿದ್ದಾರೆ.

ಇನ್ನು ಮಹಾರಾಷ್ಟ್ರ ವಿಧಾನಸಭೆ 288 ಸ್ಥಾನಗಳನ್ನು ಹೊಂದಿದ್ದು, ಸರ್ಕಾರ ರಚನೆಗೆ 145 ಮ್ಯಾಜಿಂಕ್ ನಂಬರ್ ಆಗಿದೆ.

SCROLL FOR NEXT