ದೇಶ

ಇಡೀ ದೇಶವೇ ಲಿಂಚಿಂಗ್ ಬಗ್ಗೆ ಆತಂಕಗೊಂಡಿದೆ: ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್

Shilpa D

ಜೈಪುರ: ಸಾಮೂಹಿಕ ಹತ್ಯೆಗಳಂತ ಘಟನೆಯಿಂದಾಗಿ ದೇಶದ ಜನತೆ ಆತಂಕಗೊಂಡಿದ್ದಾರೆ ಎಂದು ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ, ಜಾನುವಾರು ಕಳ್ಳತನದ ಶಂಕೆ ಮತ್ತು ಅಂತಹ ಘಟನೆಗಳು ಸಂಭವಿಸಬಾರದು ಮತ್ತೆ ಸಂಭವಿಸಬಾರದು ಎಂದು ತಿಳಿಸಿದ್ದಾರೆ.

ಹಿಂಗೋನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲಿಂಚಿಂಗ್ ಬಗ್ಗೆ ಪ್ರತಿಕ್ರಿಯಿಸಿದರು, ಹಸು ಎಂದರೇ ತಾಯಿ, ಪ್ರತಿಯೊಬ್ಬ ಹಿಂದೂವಿಗೂ ಹಸುವನ್ನು ತಾಯಿಯೆಂದೇ ಪರಿಗಣಿಸುತ್ತಾರೆ, ಧರ್ಮವೊಂದರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಭಯ, ಅಪನಂಬಿಕೆ ಮತ್ತು ಹಿಂಸಾಚಾರದ ವಾತಾವರಣ ರೂಪುಗೊಳ್ಳುತ್ತಿದೆ,  ಇಡೀ ದೇಶಕ್ಕೆ ದೇಶವೇ  ಇದರ ಬಗ್ಗೆ ಆತಂಕ ಗೊಂಡಿದೆ, ಇಂಥಹ ಘಟನೆಗಳು ಮರುಕಳಿಸಬಾರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ತಿಳಿಸಿದ್ದಾರೆ.

ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರು  ಸಮಾಜ ವಿರೋಧಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ, "ಬಿಜೆಪಿ, ಆರ್‌ಎಸ್‌ಎಸ್ ಮತ್ತು ವಿಎಚ್‌ಪಿ ಮುಖಂಡರಿಂದ ಸ್ಪಷ್ಟ ಸಂದೇಶ ರವಾನೆಯಾದರೇ ಇಂಥಹ ಘಟನೆಗಳು ನಡೆಯುವುದಿಲ್ಲ ಎಂದು ಅಬಿಪ್ರಾಯ ಪಟ್ಟಿದ್ದಾರೆ. 

SCROLL FOR NEXT