ದೇಶ

ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕೇರಳ ಶಾಸಕ ಕಮರುದ್ದೀನ್

Lingaraj Badiger

ತಿರುವನಂತಪುರ: ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಐವರು ನೂತನ ಶಾಸಕರು ಸೋಮವಾರ ಆರಂಭಗೊಂಡ ಕೇರಳ ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ವಿ.ಕೆ.ಪ್ರಶಾಂತ್, ಕೆ.ಯು.ಜೆನಿಶ್ ಕುಮಾರ್, ಟಿ.ಜೆ.ವಿನೋದ್, ಶನಿಮೋಲ್ ಉಸ್ಮಾನ್ ಮತ್ತು ಎಂ.ಸಿ.ಕಮರುದ್ದೀನ್ ಅವರು ವಿಧಾನಸಭೆಯ ಪ್ರಶ್ನೋತ್ತರ ಅವಧಿಯ ಬಳಿಕ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅವರ ಸಮ್ಮುಖದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಮರುದ್ದೀನ್ ಅವರು ಕನ್ನಡದಲ್ಲಿ ಹಾಗೂ ಇತರರು ಮಲಯಾಳಂ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಮೊದಲ ಬಾರಿ ಕಮರುದ್ದೀನ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶಾಸಕರಾಗಿದ್ದ ಪಿ. ಬಿ ಅಬ್ದುಲ್ ರಝಾಕ್ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಅ.21ರಂದು ನಡೆದ ಉಪಚುನಾವಣೆಯಲ್ಲಿ 7923 ಮತಗಳ ಅಂತರದಿಂದ ಕಮರುದ್ದೀನ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.

SCROLL FOR NEXT