ದೇಶ

ಮುಸ್ಲಿಂ ಪ್ರಾಬಲ್ಯದ ಕಣಿವೆಗೆ 'ನಾಜಿ ಲವರ್ಸ್: ಯುರೋಪಿಯನ್ ನಿಯೋಗ ಕಾಶ್ಮೀರ ಭೇಟಿಗೆ ಓವೈಸಿ ವಾಗ್ದಾಳಿ

Nagaraja AB

ನವದೆಹಲಿ: ಯುರೋಪಿಯನ್ ನಿಯೋಗ ಕಾಶ್ಮೀರ ಭೇಟಿ  ಮಾಡಿದ್ದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಎಐಎಂಐಎಂ ಮುಖಂಡ ಅಸಾದುದ್ದೀನ್  ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ಯುರೋಪಿಯನ್ ನಿಯೋಗದ ಸದಸ್ಯರು ನಾಜಿ ಲವರ್ಸ್ ಆಗಿದ್ದು, ಇಸ್ಲಾಮೊಪೊಬಿಯಾದಿಂದ ಬಳಲುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇಸ್ಲಾಮೊಪೊಬಿಯಾದಿಂದ ಬಳುತ್ತಿರುವ ಯುರೋಪಿಯನ್ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿರುವುದು ಅದ್ಬುತ ಆಯ್ಕೆಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ

ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ಕೂಡಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯುರೋಪಿಯನ್ ಸಂಸದರ ನಿಯೋಗವನ್ನು ಕಾಶ್ಮೀರ ಭೇಟಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಭಾರತೀಯ ಸಂಸದರು ಮತ್ತು ನಾಯಕರು ವಿಮಾನ ನಿಲ್ದಾಣದಿಂದ ವಾಪಾಸ್ ಕಳುಹಿಸಲಾಗುತ್ತಿದೆ. ಇದು ರಾಷ್ಟ್ರವಾದದ ಅತಿರೇಕವಾಗಿದೆ ಎಂದಿದ್ದಾರೆ.

ಸೋಮವಾರ  ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ ಯುರೋಪಿಯನ್ ನಿಯೋಗ ಇಂದು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿತು.

SCROLL FOR NEXT