ದೇಶ

ಜನರನ್ನು ದಾರಿ  ತಪ್ಪಿಸುತ್ತಿರುವ ಮೋದಿ ಸರ್ಕಾರ: ಅಧೀರ್ ಚೌಧರಿ

Srinivas Rao BV

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ "ತಪ್ಪು ನೀತಿಗಳಿಂದ  ದೇಶದ  ಜನರನ್ನು ದಾರಿ  ತಪ್ಪಿಸುತ್ತಿದೆ ಎಂದು ಲೋಕಸಭೆಯ ಕಾಂಗ್ರೆಸ್ ಮುಖಂಡ ಅಧೀರ್ ಚೌಧರಿ ಎಂದು ವಾಗ್ದಾಳಿ ನಡೆಸಿದ್ದಾರೆ. 

ಕಾಶ್ಮೀರದ ಪರಿಸ್ಥಿತಿ "ಹದಗೆಡಲು"ಕೇಂದ್ರ ನೀತಿಯೇ ಮುಖ್ಯ ಕಾರಣ, ಕಣಿವೆಯಲ್ಲಿನ "ನೈಜ ಪರಿಸ್ಥಿತಿಯನ್ನು" ಮರೆಮಾಡಲು ಮಾತ್ರ ಉತ್ಸುಕವಾಗಿದೆ ಎಂದೂ ಅವರು ದೂರಿದರು. ಮುರ್ಷಿದಾಬಾದ್ ಜಿಲ್ಲೆಯ ಬೆರ್ಹಾಂಪೋರ್ ಲೋಕಸಭಾ ಸ್ಥಾನದ ಐದು ಬಾರಿ ಸಂಸದರೂ ಆಗಿರುವ ಚೌಧರಿ ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾದ ಐದು ಕಾರ್ಮಿಕರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, ಕೇಂದ್ರ ಗೃಹ ಕಾರ್ಯದರ್ಶಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು ಕಣಿವೆಯಲ್ಲಿ ಮೃತಪಟ್ಟ ಪಶ್ಚಿಮ ಬಂಗಾಳದ ಇತರ ಕಾರ್ಮಿಕರ ಶವಗಳನ್ನು ರಾಜ್ಯಕ್ಕೆ ತರಲು ವ್ಯವಸ್ಥೆ ಮಾಡಬೇಕೆಂದು ಕೇಂದ್ರವನ್ನು ಅವರು ಒತ್ತಾಯಿಸಿದರು. ದಿನ ಕಳೆದಂತೆ ಕಣಿವೆಯ ಪರಿಸ್ಥಿತಿ ಹದಗೆಡುತ್ತಿದೆ. ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ ಇದು ನಮ್ಮ ಕೈಮೀರುತ್ತಿದೆ ಆದರೆ ಇದು ನೈಜ ಪರಿಸ್ಥಿತಿಯನ್ನು ಮರೆಮಾಡಲು ಪ್ರಯತ್ನಿಸುವುದರಲ್ಲಿ ಮಾತ್ರ ಸರಕಾರ ಬಹಳ ಜಾಣತನ ತೋರುತ್ತಿದೆ ಎಂದೂ ಅವರು ಕಿಡಿ ಕಾರಿದರು. ಪಶ್ಚಿಮ ಬಂಗಾಳದ ಐವರು ವಲಸೆ ಕಾರ್ಮಿಕರನ್ನು ಮಂಗಳವಾರ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದು ಹಾಕಿದ್ದಾರೆ.

SCROLL FOR NEXT