ಲಡಾಕ್ ಕೇಂದ್ರಾಡಳಿತ ಪ್ರದೇಶದ ಮೊದಲ ಗವರ್ನರ್ ಆಗಿ ಗುರುವಾರ ರಾಧಾ ಕೃಷ್ಣ ಮಾಥೂರ್ ಪ್ರಮಾಣವಚನ ಸ್ವೀಕರಿಸಿದರು.  
ದೇಶ

ಜಮ್ಮು-ಕಾಶ್ಮೀರಕ್ಕೆ ಗಿರೀಶ್ ಚಂದ್ರ ಮುರ್ಮು, ಲಡಾಕ್ ಗೆ ಆರ್ ಕೆ ಮಾಥುರ್ ಲೆ.ಗವರ್ನರ್ ಗಳಾಗಿ ಪ್ರತಿಜ್ಞಾವಿಧಿ ಸ್ವೀಕಾರ 

ಲಡಾಕ್ ಕೇಂದ್ರಾಡಳಿತ ಪ್ರದೇಶದ ಮೊದಲ ಗವರ್ನರ್ ಆಗಿ ಗುರುವಾರ ರಾಧಾ ಕೃಷ್ಣ ಮಾಥೂರ್ ಪ್ರಮಾಣವಚನ ಸ್ವೀಕರಿಸಿದರು. 

ನವದೆಹಲಿ/ಶ್ರೀನಗರ: ಲಡಾಕ್ ಕೇಂದ್ರಾಡಳಿತ ಪ್ರದೇಶದ ಮೊದಲ ಗವರ್ನರ್ ಆಗಿ ಗುರುವಾರ ರಾಧಾ ಕೃಷ್ಣ ಮಾಥೂರ್ ಪ್ರಮಾಣವಚನ ಸ್ವೀಕರಿಸಿದರು. 


ಜಮ್ಮು-ಕಾಶ್ಮೀರ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ನ್ಯಾಯಾಧೀಶ ಗೀತಾ ಮಿತ್ತಲ್ ಮಾಥೂರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಲೇಹ್ ನಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋಧನೆ ನಡೆಯಿತು.


ಇನ್ನೊಂದೆಡೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಿಗೆ ನೂತನ ಗವರ್ನರ್ ಆಗಿ ಗಿರೀಶ್ ಚಂದ್ರ ಮುರ್ಮು ಅಧಿಕಾರ ವಹಿಸಿಕೊಂಡರು. ಸರ್ಕಾರದ ಕಚೇರಿ ಶ್ರೀನಗರದಿಂದ ಜಮ್ಮುವಿಗೆ ವರ್ಗಾವಣೆಗೊಂಡರೂ ಸಹ ನೂತನ ಗವರ್ನರ್ ಅವರ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಕಾಶ್ಮೀರ ದೇಶದ ಬೇರೆ ಭಾಗಗಳ ಜೊತೆ ಸೇರಿಕೊಂಡು ಸಮಗ್ರ ಭಾರತವಾಗಿದೆ ಎಂದು ಬಿಂಬಿಸಲು ಶ್ರೀನಗರದಲ್ಲಿಯೇ ನಡೆಸಲಾಯಿತು. 


ದಶಕಗಳ ಕಾಲ ಜಮ್ಮು -ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ಸುಮಾರು 3 ತಿಂಗಳ ನಂತರ ಜಮ್ಮು ಮತ್ತು ಕಾಶ್ಮೀರ ಎಂದು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರಚಿಸಲಾಗಿದೆ. 


ಇದುವರೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರನ್ನು ಗೋವಾ ರಾಜ್ಯಪಾಲರಾಗಿ ವರ್ಗಾಯಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!