ಶಿವಸೇನೆ ನಿಯೋಗದ ರಾಜ್ಯಪಾಲರ ಭೇಟಿ 
ದೇಶ

ಮುಗಿಯದ 'ಮಹಾ' ಸಂಕಟ: ಕುತೂಹಲ ಕೆರಳಿಸಿದ ಶಿವಸೇನೆ ನಿಯೋಗದ ರಾಜ್ಯಪಾಲರ ಭೇಟಿ

ಶಾಸಕ ಆದಿತ್ಯ ಠಾಕ್ರೆ ಸೇರಿದಂತೆ ಶಿವಸೇನೆ ಮುಖಂಡರ ನಿಯೋಗಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಇಲ್ಲಿನ ರಾಜಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದೆ. 

ಮುಂಬೈ: ಶಾಸಕ ಆದಿತ್ಯ ಠಾಕ್ರೆ ಸೇರಿದಂತೆ ಶಿವಸೇನೆ ಮುಖಂಡರ ನಿಯೋಗಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಇಲ್ಲಿನ ರಾಜಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದೆ. ಚುನಾವಣೆ ಫಲಿತಾಂಶ ಬಂದು ವಾರವಾದರೂ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮಾತುಕತೆ ಮುಗಿದಿಲ್ಲ, ಸರ್ಕಾರ ರಚನೆ ಬಿಕ್ಕಟ್ಟು ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಶಿವಸೇನೆ ನಿಯೋಗದ ರಾಜ್ಯಪಾಲರ ಭೇಟಿ ಇನ್ನಷ್ಟು ಕುತೂಹಲ ಕೆರಳಿಸಿದೆ.

ರಾಜ್ಯದಲ್ಲಿನ ಅಕಾಲಿಕ ಮಳೆಯಿಂದ ಬಳಲುತ್ತಿರುವ ರೈತರಿಗೆ ನಿಯೋಗ ತ್ವರಿತ ಆರ್ಥಿಕ ನೆರವು ಕೋರಿದೆ ಎಂದು ಸೇನಾ ಮುಖಂಡರೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ಸಚಿವ ಏಕನಾಥ್ ಶಿಂಧೆ ಸೇರಿದಂತೆ ಹಲವು ನಾಯಕರಿದ್ದ ನಿಯೋಗ ರಾಜ್ಯಪಾಲರ ಭೇಟಿ ಮಾಡಿದೆ.ಶಿಂಧೆ ಶಿವಸೇನೆಯ ಪರ ವಿಧಾನಸಭೆ ನಾಯಕರಾಗಿ ಆಯ್ಕೆಗೊಂಡಿದ್ದಾರೆ.

ಬಿಜೆಪಿಯೊಂದಿಗಿನ ಆಡಳಿತ ರಚನೆ ಮಾತುಕತೆ ಬಗೆಗೆ ಕೇಳಲಾಗಿ ಆದಿತ್ಯ ಠಾಕ್ರೆ ತಮ್ಮ ಪಕ್ಷವು ಬಿಜೆಪಿಯಿಂದ ಏನನ್ನೂ ಕೇಳಿಲ್ಲ ಎಂದು ಹೇಳಿದರು ಅವರ ಮೈತ್ರಿಕೂಟ ಸಂಕಟದಲ್ಲಿ ಸಿಕ್ಕಿದೆ ಆದರೆ ನಮ್ಮ ತಂದೆ ಮತ್ತು ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಸರ್ಕಾರ ರಚನೆಗೆ ಅಂತಿಮ ಕರೆ ನೀಡಲಿದ್ದಾರೆ ಎಂದು  ಹೇಳಿದ್ದಾರೆ.

ಆದಿತ್ಯ ಠಾಕ್ರೆ ರಾಜ್ಯಪಾಲರ ಭೇಟಿ ನಂತರ ಂಆದ್ಯಮಗಳೊಡನೆ ಂಆತನಾಡಿದ್ದು ತಾವು "ರೈತರ ಸಮಸ್ಯೆ" ಕುರಿತು ಚರ್ಚಿಸಿದ್ದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT