ದೇಶ

ಐಐಟಿ ಮದ್ರಾಸ್, ಬಿಎಚ್ ಯು, ದೆಹಲಿ ವಿವಿ ಸೇರಿ ಐದು ಸಂಸ್ಥೆಗಳಿಗೆ ಉತ್ಕೃಷ್ಟ ಸ್ಥಾನಮಾನ

Lingaraj Badiger

ನವದೆಹಲಿ: ಐಐಟಿ ಮದ್ರಾಸ್, ದೆಹಲಿ ವಿಶ್ವವಿದ್ಯಾಲಯ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸೇರಿದಂತೆ ದೇಶದ ಐದು ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ 'ಉತ್ಕೃಷ್ಟ ಸಂಸ್ಥೆ ಸ್ಥಾನಮಾನ' ನೀಡಿದೆ.

ಕಳೆದ ತಿಂಗಳು ವಿವಿ ಅನುದಾನ ಆಯೋಗ(ಯುಜಿಸಿ) ಮಾಡಿದ ಶಿಫಾರಸಿನ ಆಧಾರದ ಮೇಲೆ ಐಐಟಿ ಮದ್ರಾಸ್, ಐಐಟಿ ಖರಗಪುರ್, ದೆಹಲಿ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಹಾಗೂ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ 'ಉತ್ಕೃಷ್ಟ ಸಂಸ್ಥೆ ಸ್ಥಾನಮಾನ' ನೀಡಲಾಗಿದೆ.

ಐಐಟಿ ಮದ್ರಾಸ್ ಹಾಗೂ ಐಐಟಿ ಖರಗಪುರ್ ಸೇರಿದಂತೆ ಸಾರ್ವಜನಿಕ ವಲಯದ ಐದು ಸಂಸ್ಥೆಗಳಿಗೆ 'ಉತ್ಕೃಷ್ಟ ಸಂಸ್ಥೆ ಸ್ಥಾನಮಾನ' ನೀಡಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್ ಅವರು ಹೇಳಿದ್ದಾರೆ.

'ಉತ್ಕೃಷ್ಟ ಸಂಸ್ಥೆ ಸ್ಥಾನಮಾನ' ಪಡೆದಿರುವ ಈ ಐದು ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 1000 ಕೋಟಿ ರೂ. ಅನುದಾನ ದೊರೆಯಲಿದೆ.

SCROLL FOR NEXT