ದೇಶ

ಚಂದ್ರಯಾನ 2 ವೈಫಲ್ಯ ಮುಂದಿನ ಮಿಷನ್ ಗಳ ಮೇಲೆ ಪರಿಣಾಮ ಬೀರಲ್ಲ: ಇಸ್ರೋ

Lingaraj Badiger

ನವದೆಹಲಿ: ಚಂದ್ರಯಾನ 2 ಮಿಷನ್ ವೈಫಲ್ಯ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಯ ಇತರೆ ಯಾವುದೇ ಮಿಷನ್ ಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಶನಿವಾರ ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಚಂದ್ರಯಾನ 2 ವೈಫಲ್ಯ, 2022ಕ್ಕೆ ಉಡಾವಣೆಯಾಗಲಿರುವ ಮಾನವ ಸಹಿತ ಗಗನಯಾನ ಸೇರಿದಂತೆ ಇತರೆ ಯಾವುದೇ ಮಿಷನ್ ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಚಂದ್ರಯಾನ ಮತ್ತು ಗಗನಯಾನ ಎರಡೂ ಮಿಷನ್ ಗಳು ವಿಭಿನ್ನ ಉದ್ದೇಶ ಮತ್ತು ಆಯಾಮಗಳನ್ನು ಹೊಂದಿವೆ ಎಂದು ಇಸ್ರೋ ಅಧಿಕಾರಿ ಪಿಜಿ ದಿವಾಕರ್ ಅವರು ಹೇಳಿದ್ದಾರೆ.

ಚಂದ್ರಯಾನ 2 ವೈಫಲ್ಯದಿಂದ ಯಾವುದೇ ಇತರೆ ಯೋಜನೆಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಪ್ರತಿಯೊಂದು ಯೋಜನೆಯೂ ವಿಭಿನ್ನವಾಗಿರುತ್ತವೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ಚಂದ್ರಯಾನ 2 ವೈಫಲ್ಯಕ್ಕೆ ಕಾರಣ ಏನು ಎಂಬ ಪ್ರಶ್ನೆ ದಿವಾಕರ್ ಅವರು ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ಇಂದು ಬೆಳಗಿನ ಜಾವ 1.30ರ ಸುಮಾರಿಗೆ ಚಂದ್ರನ ಮೇಲೆ ಲ್ಯಾಂಡರ್‌ ವಿಕ್ರಂ ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಸಂಪರ್ಕ ಕಡಿದುಕೊಂಡಿತು. ಈ ಘಟನೆ ಭಾರತೀಯರಲ್ಲಿ ತೀವ್ರ ನಿರಾಶೆ ಉಂಟುಮಾಡಿದೆ.

SCROLL FOR NEXT