ದೇಶ

ಉತ್ತರಾಖಂಡ: ಪಬ್ ಜಿ ಆಡದಂತೆ ಬುದ್ಧಿ ಹೇಳಿದ ತಂದೆಗೆ ಹಿಗ್ಗಾಮುಗ್ಗಾ ಥಳಿಸಿದ ಮಗ!

Manjula VN

ಡೆಹ್ರಾಡೂನ್: ದೇಶದಾದ್ಯಂತ ಕ್ರೇಜ್ ಹುಟ್ಟು ಹಾಕಿರುವ ಪಬ್ ಜೀ ಮೊಬೈಲ್ ಗೇಮ್ ಆಡದಂತೆ ಬುದ್ಧಿ ಹೇಳಿದ ತಂದೆಗೆ ಮಗನೊಬ್ಬ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉದಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರದಲ್ಲಿ ನಡೆದಿದೆ. 

ಪಬ್ ಜಿ ಗೇಮ್ ಆಡುವ ವೇಳೆ ಮಧ್ಯ ಪ್ರವೇಶಿಸಿದ ಕಾರಣ ಪುತ್ರ ಹಾಗೂ ಅಳಿಯ ಇಬ್ಬರೂ ಸೇರಿ ಥಳಿಸಿರುವ ಕುರಿತು ಸತ್ನಂ ಚೋಪ್ರಾ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಸೆ.7 2019ರಂದು ಚೋಪ್ರಾ ಅವರು ದೂರು ದಾಖಲಿಸಿದ್ದಾರೆ. ಇಂಜಿನಿಯರಿಂಗ್ ಓದುತ್ತಿರುವ ತಮ್ಮ ಪುತ್ರ ಅರ್ನಬ್ ಚೋಪ್ರಾ ಹಾಗೂ ಅಳಿಯ ಅನಿಕೇತ್ ಸಿಂಗ್ ಇಬ್ಬರೂ ಪಬ್ ಜಿ ಗೇಮ್ ಆಡುವ ವೇಳೆ ಮಧ್ಯೆಪ್ರವೇಶಿಸಿದ್ದಕ್ಕೆ ಥಳಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. 

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ ಕೈಲಾಶ್ ಚಂದ್ರ ಭಟ್ ಅವರು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಥಳಿತಕ್ಕೊಳಗಾದ ವ್ಯಕ್ತಿಯನ್ನು ಸತ್ನಂ ಚೋಪ್ರಾ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ. 

ಬ್ಲೂ ವೇಲ್ ಗೇಮ್ ಬಳಿಕ ಇದೀಗ ಪಬ್ ಜಿ ಗೇಮ್ ಗೀಳು ಜನರನ್ನು ಹೆಚ್ಚು ಕಾಡಲು ಆರಂಭವಾಗಿದೆ. ಪಬ್ ಜಿ ಶಸ್ತ್ರಾಸ್ತ್ರಗಳನ್ನು ಬಳಸಿ ಲೈವ್ ನಲ್ಲಿ ಎದುರಾಳಿಗಳನ್ನು ಹೊಡೆದುರುಳಿಸುವ ರೋಮಾಂಚನಕಾರಿ ಮೊಬೈಲ್ ಗೇಮ್ ಆಗಿದೆ. ಅದ್ಭುತ ಗ್ರಾಫಿಕ್ಸ್, ಫೀಚರ್ಸ್ ಮತ್ತು ಸೌಂಡ್ ಎಫೆಕ್ಟ್ ನಿಂದ ಅತಿ ಕಡಿಮೆ ಸಮಯದಲ್ಲಿ ವಿಶ್ವದ ಗೇಮ್ ಪ್ರಿಯರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯುದ್ಧ ಭೂಮಿಯಂತೆ ಅನುಭವ ಕೊಡುತ್ತದೆ. ಈ ಹಿಂದೆ ಭಾರತೀಯ ಸೇನೆ ಆಟವನ್ನು ಆಟದಂತೆ ಯೋಧರಿಗೆ ನಿರ್ದೇಶಿಸಿತ್ತು. ಬಿಡುವು ಸಿಕ್ಕ ಸಮಯದಲ್ಲಿ ಯೋಧರು ಈ ಗೇಮ್ ಆಡುತ್ತಿದ್ದರಿಂದ ಸೇನೆ ಈ ರೀತಿಯ ಆದೇಶವನ್ನು ನೀಡಿತ್ತು. 

SCROLL FOR NEXT