ದೇಶ

ಗಾಂಧಿ ಪ್ರತಿಮೆ ಧ್ವಂಸ: ಪ್ರಿಯಾಂಕಾ ವಾದ್ರಾ ಗರಂ

Srinivasamurthy VN

ನವದೆಹಲಿ: ಉತ್ತರ ಪ್ರದೇಶದ ಜಾಲನ್ ಜಿಲ್ಲೆಯಲ್ಲಿ ನಡೆದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಖಂಡಿಸಿದ್ದಾರೆ.

“ಕೇವಲ ಪ್ರತಿಮೆಗಳನ್ನು ಧ್ವಂಸಗೊಳಿಸುವುದರ ಮೂಲಕ ಮಹಾತ್ಮ ಗಾಂಧಿಯವರ ಶ್ರೇಷ್ಠತೆಯ ಒಂದು ಭಾಗವನ್ನೂ ಅಲುಗಾಡಿಸಲಾಗದು” ಎಂದು ಕಿಡಿಕಾರಿದ್ದಾರೆ. ಜಾಲನ್ಸ್ ಗಾಂಧಿ ಇಂಟರ್ ಕಾಲೇಜಿನ ಬಳಿ 1970ರಲ್ಲಿ ಸ್ಥಾಪಿಸಲಾಗಿದ್ದ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ಶುಕ್ರವಾರ ಧ್ವಂಸಗೊಳಿಸಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ, “ಕೆಲ ದಿನಗಳ ಹಿಂದಷ್ಟೆ ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್ ಪುತ್ಥಳಿ ಧ್ವಂಸಗೊಳಿಸಲಾಗಿತ್ತು. ಇದೀಗ ಗಾಂಧಿ ಪ್ರತಿಮೆಯನ್ನು ನಾಶಪಡಿಸಲಾಗಿದೆ. ಮಹಾನ ವ್ಯಕ್ತಿಗಳ ಪ್ರತಿಮೆಗಳನ್ನು ಕಗ್ಗತ್ತಲಿನಲ್ಲಿ ಧ್ವಂಸಗೊಳಿಸುವುದೇ ಕಿಡಿಗೇಡಿಗಳ ಮಹಾನ್ ಸಾಧನೆ” ಎಂದು ಟ್ವಿಟರ್ ಮೂಲಕ ಟೀಕಿಸಿದ್ದಾರೆ. “ಅವರನ್ನು ಅಪಮಾನಗೊಳಿಸಲು ಯತ್ನಿಸುತ್ತಿದ್ದೀರಾ? ಖಂಡಿತ ಸಾಧ್ಯವಿಲ್ಲ, ಅವರ ಶ್ರೇಷ್ಠತೆಯ ಒಂದು ಭಾಗವನ್ನೂ ಅಲುಗಾಡಿಸಲಾಗದು” ಎಂದು ಹೇಳಿದ್ದಾರೆ.

SCROLL FOR NEXT