ದೇಶ

ಹಿಂದೂ ಮಹಾಸಾಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 7 ಚೀನೀ ಯುದ್ಧನೌಕೆಗಳನ್ನು ಪತ್ತೆ ಹಚ್ಚಿದ ಭಾರತೀಯ ನೌಕೆ 

Sumana Upadhyaya

ನವದೆಹಲಿ; ಹಿಂದೂ ಮಹಾಸಾಗರದ ಸುತ್ತಮುತ್ತ ಏಳು ಚೀನಾದ ನೌಕಾಪಡೆ ಯುದ್ಧ ನೌಕೆಗಳು ಕಾರ್ಯಾಚರಣೆ ನಡೆಸುತ್ತಿದ್ದು ಅವುಗಳಲ್ಲಿ 27 ಸಾವಿರ ಟನ್ ಗಿಂತಲೂ ಹೆಚ್ಚಿನ ತೂಕದ ಉಭಯಚರ ಹಡಗುಗಳು ಸೇರಿವೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. 


ಈ ಬಗ್ಗೆ ಸುದ್ದಿಸಂಸ್ಥೆಗೆ ವಿಶೇಷ ಚಿತ್ರಗಳು ಲಭ್ಯವಾಗಿದೆ. ಚೀನಾದ ಯುದ್ಧ ನೌಕೆ ಡಾಕ್ ಕ್ಸಿಯಾನ್ -32 ಈ ತಿಂಗಳ ಆರಂಭದಲ್ಲಿ ಶ್ರೀಲಂಕಾಕ್ಕೆ ಪ್ರವೇಶಿಸುವಾಗ ಹಿಂದೂ ಮಹಾಸಾಗರ ಮೂಲಕ ಹಾದುಹೋಗುವ ಚಿತ್ರ ಲಭ್ಯವಾಗಿದೆ. ಇದು ಸೆರೆ ಸಿಕ್ಕಿದ್ದು ಭಾರತೀಯ ನೌಕೆಯಾದ ಅಮೆರಿಕಾದಿಂದ ಖರೀದಿಸಲ್ಪಟ್ಟ ಪಿ-81 ಜಲಾಂತರ್ಗಾಮಿ ಯುದ್ಧ ಪತ್ತೇದಾರಿ ವಿಮಾನ ಮತ್ತು ಇತರ ಕಣ್ಗಾವಲು ಸಾಧನಗಳ ಮೂಲಕ ಪತ್ತೆಹಚ್ಚಿದೆ.


ಪಿ-81 ಜಲಾಂತರ್ಗಾಮಿ ಯುದ್ಧ ವಿರೋಧಿ ನೌಕೆ ಮತ್ತು ದೀರ್ಘ-ಶ್ರೇಣಿಯ ಕಣ್ಗಾವಲು ವಿಮಾನ ಹಿಂದೂ ಮಹಾ ಸಾಗರದ ದಕ್ಷಿಣ ಪ್ರಾಂತ್ಯದ ಮೂಲಕ ಶ್ರೀಲಂಕಾಕ್ಕೆ ಹಾದುಹೋಗುವ ಚೀನಾದ ಯುದ್ಧ ನೌಕೆಯ ಚಿತ್ರ ತೆಗೆದಿದೆ.


ಡಾಕ್ ಕ್ಸಿಯಾನ್-32 ಹೊರತುಪಡಿಸಿ ಕಡಲ್ಗಳ್ಳತನದ ಬೆಂಗಾವಲು ಕಾರ್ಯಪಡೆ 32 ಮತ್ತು ಕೌಂಟರ್-ಪೈರಸಿ ಬೆಂಗಾವಲು ಕಾರ್ಯಪಡೆ 33 ರ ಮೂರು ಹಡಗುಗಳು ಸೇರಿವೆ, ಅದು ಗಲ್ಫ್ ಆಫ್ ಅಡೆನ್‌ನಲ್ಲಿ ಸ್ಥಾನಗಳನ್ನು ವಿನಿಮಯ ಮಾಡಿಕೊಂಡು ಅಲ್ಲಿ ನಿಯೋಜನೆಗೊಳ್ಳುತ್ತವೆ.


ಭಾರತದ ವಿಶೇಷ ಆರ್ಥಿಕ ವಲಯ ಮತ್ತು ಪ್ರಾಂತೀಯ ನೀರಿನ ಮೂಲಕ ಹಾದುಹೋಗುವ ಚೀನಾ ಯುದ್ಧ ನೌಕೆಗಳ  ಚಲನವಲನಗಳನ್ನು ನಿರಂತರ ನಿಗಾವಹಿಸಲಾಗುತ್ತದೆ. ಹಿಂದೂ ಮಹಾಸಾಗರ ಮೂಲಕ ಬಹುತೇಕ ಚೀನಾದ ವ್ಯಾಪಾರ-ವಹಿವಾಟುಗಳು ನಡೆಯುತ್ತಿರುವುದರಿಂದ ಈ ಪ್ರಾಂತ್ಯದ ಮೇಲೆ ತನ್ನ ಪ್ರಭಾವವನ್ನು ಬೀರುವ ಹವಣಿಕೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ನೌಕಾಪಡೆ ಪ್ರಯತ್ನಿಸುತ್ತಿದೆ. 

SCROLL FOR NEXT