ದೇಶ

ರಾಜೀವ್ ಕುಮಾರ್ ತನಿಖೆಗೆ ಸಹಕರಿಸದಿದ್ದರೆ ಸಿಬಿಐ ಬಂಧಿಸಬಹುದು: ಕೋರ್ಟ್

Vishwanath S

ಕೋಲ್ಕತ್ತಾ: ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕೋಲ್ಕತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ತನಿಖೆಗೆ ಸಹಕರಿಸಬೇಕು ಎಂದು ಕೋರ್ಟ್ ಹೇಳಿದೆ.

ಕೇಂದ್ರ ತನಿಖಾ ಸಂಸ್ಥೆಗೆ ಸಹಕರಿಸದಿದ್ದರೆ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಸಿಬಿಐಗೆ ಬಂಧನದ ವಾರಂಟ್ ಪಡೆಯುವ ಅಗತ್ಯವಿಲ್ಲ ಎಂದು ಅಲಿಪುರ್ ನ್ಯಾಯಾಲಯ ಇಂದು ಅಭಿಪ್ರಾಯಪಟ್ಟಿದೆ.

ರಾಜೀವ್ ಕುಮಾರ್ ಅವರು ಪ್ರಸ್ತುತ ಸಿಐಡಿಯ ಎಡಿಜಿಯಾಗಿದ್ದಾರೆ. ರಾಜೀವ್ ಕುಮಾರ್ ಮತ್ತು ಸಿಬಿಐ ಪರ ವಕೀಲರ ವಾದ-ವಿವಾದಗಳನ್ನು ಆಲಿಸಿದ ಬಳಿಕ ಅಲಿಪುರ್ ಸೆಷನ್ಸ್ ಕೋರ್ಟ್‍ನ ನ್ಯಾಯಾಧೀಶರು, ಸಿಬಿಐಗೆ ಸುಪ್ರೀಂ ಕೋರ್ಟ್ ಮತ್ತು ಕೋಲ್ಕತ್ತಾ ಹೈಕೋರ್ಟ್ ಗಳ ನಿರ್ದೇಶನ ಇರುವುದರಿಂದ ಅವರನ್ನು ಬಂಧಿಸಲು ಈ ನ್ಯಾಯಾಲಯದಿಂದ ವಾರಂಟ್ ಆದೇಶವನ್ನು ಪಡೆಯುವ ಅಗತ್ಯವಿಲ್ಲ ಎಂದು ಹೇಳಿದರು.

SCROLL FOR NEXT