ದೇಶ

ಹಾಕಿದ್ದು ಅಸಲಿ ಫೋಟೊ, ನೀಡಿದ್ದು ಮಾತ್ರ ನಕಲಿ ಮಾಹಿತಿ!: ಶಶಿ ತರೂರ್ ಹೊಸ ವಿವಾದ!

Srinivas Rao BV

ನವದೆಹಲಿ: ಕಾಂಗ್ರೆಸ್ ನ ನಾಯಕ ಶಶಿ ತರೂರ್ ಮಾಜಿ ಪ್ರಧಾನಿಗಳಾದ ಮಾಜಿ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು ಹಾಗೂ ಅವರ ಪುತ್ರಿ ಇಂದಿರಾ ಗಾಂಧಿ ವಿದೇಶದ ಪ್ರವಾಸದ ಫೋಟೊ ಹಾಕಿ ಯಡವಟ್ಟು ಮಾಡಿಕೊಂಡಿದ್ದಾರೆ. 

ಟ್ವೀಟ್ ನಲ್ಲಿ ಈ ಫೋಟೋವನ್ನು ಹಂಚಿಕೊಂಡಿರುವ ಶಶಿ ತರೂರ್, ನೆಹರು ಹಾಗೂ ಇಂಡಿಯಾ ಗಾಂಧಿ 1954 ರಲ್ಲಿ ಅಮೆರಿಕಾಗೆ ಭೇಟಿ ನೀಡಿದ್ದ ಫೋಟೊ ಯಾವುದೇ ವಿಶೇಷ ಸಾರ್ವಜನಿಕ ಸಂಪರ್ಕ ಅಭಿಯಾನ ಇಲ್ಲದೇ, ಎನ್ ಆರ್ ಐ ಜನಸ್ತೋಮ ನಿರ್ವಹಣೆ ಇಲ್ಲದೇ, ಮಾಧ್ಯಮಗಳ ಪ್ರಚಾರ ಇದ್ಯಾವುದೂ ಇಲ್ಲದೇ ಅಮೆರಿಕದ ಜನತೆ ನೆಹರು ಇಂದಿರಾ ಗಾಂಧಿ ಇದ್ದ ಕಾರಿನ ಸುತ್ತ ನೆರೆದಿದ್ದರು ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಹೌಡಿ ಮೋದಿ ಕಾರ್ಯಕ್ರಮವನ್ನು ಟೀಕಿಸಲು ಶಶಿ ತರೂರ್ ನೆಹರು ಇಂದಿರಾ ಗಾಂಧಿ ಅಮೆರಿಕಾಗೆ ತೆರಳಿದ್ದಾಗಿನ ಫೋಟೋ ಹಾಕಿದ್ದರು. ಆದರೆ ಶಶಿ ತರೂರ್ ಈ ಟ್ವೀಟ್ ನಲ್ಲಿ ಎರಡೆರಡು ವಿವಾದಗಳನ್ನು ಸೃಷ್ಟಿಸಿದ್ದಾರೆ. 

ಮೊದಲನೆಯದ್ದು ಅಸಲಿ ಫೋಟೊ ಹಾಗಿ ನಕಲಿ ಮಾಹಿತಿ ನೀಡಿದ್ದಾರೆ, ಅದೇನೆಂದರೆ 1954 ರಲ್ಲಿ ನೆಹರು ಇಂದಿರಾ ಗಾಂಧಿ ತೆರಳಿದ್ದು ಅಮೆರಿಕಾಗೆ ಅಲ್ಲ, ಶಶಿ ತರೂರ್ ಹಂಚಿಕೊಂಡಿರುವ ಫೋಟೊ ಅಂದಿನ ಯುಎಸ್ಎಸ್ ಆರ್ ಇಂದಿನ ರಷ್ಯಾದ್ದು. 

ಇನ್ನು ಮತ್ತೊಂದು ಯಡವಟ್ಟೇನೆಂದರೆ ಇಂದಿರಾ ಗಾಂಧಿ ಅವರನ್ನು ಶಶಿ ತರೂರ್ ಇಂಡಿಯಾ ಗಾಂಧಿ ಎಂದು ಹೇಳಿರುವುದು ಬರೆದಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಶಶಿ ತರೂರ್ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ.

SCROLL FOR NEXT