ಸಂಗ್ರಹ ಚಿತ್ರ 
ದೇಶ

ಅಸ್ಸಾಂ: ಎನ್ಆರ್ ಸಿ ಪಟ್ಟಿಯಲ್ಲಿ ಹೆಸರಿಲ್ಲದವರೂ ಮತದಾನ ಮಾಡಬಹುದು: ಚು.ಆಯೋಗ

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಇಲ್ಲದೇ ಇರುವ ವ್ಯಕ್ತಿಗಳು ಕೂಡ ಚುನಾವಣೆಯಲ್ಲಿ ಮತದಾನ ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಇಲ್ಲದೇ ಇರುವ ವ್ಯಕ್ತಿಗಳು ಕೂಡ ಚುನಾವಣೆಯಲ್ಲಿ ಮತದಾನ ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ಈ ಕುರಿತಂತೆ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದ್ದು, ಎನ್ಆರ್ ಸಿ ಪಟ್ಟಿಯಲ್ಲಿ ಹೆಸರು ಇಲ್ಲದ ವ್ಯಕ್ತಿಗಳನ್ನು ಸಂದೇಹಾಸ್ಪದ ಎಂಬುದಾಗಿ ಗುರುತಿಸಬಾರದು ಎಂದು ಚುನಾವಣಾ ಆಯೋಗ ಹೇಳಿದೆ ಎನ್ನಲಾಗಿದೆ. ಇನ್ನು ಎನ್ಆರ್ ಸಿ ಪಟ್ಟಿಗೆ ಸಂಬಂಧಿಸಿದಂತೆ ಕೆಲ ಸ್ಪಷ್ಟನೆಗಳನ್ನು ನೀಡಿರುವ ಚುನಾವಣಾ ಆಯೋಗ, ಅಸ್ಸಾಂನಲ್ಲಿ ಕೆಲವು ನಾಗರಿಕರ ಪೌರತ್ವ ಅನಿಶ್ಚಿತ ಅಥವಾ ವಿವಾದದಲ್ಲಿದೆ. ಹೀಗಿರುವವರನ್ನು ಸಂದೇಹಾಸ್ಪದ (Doubtful- ‘D’ voters) ಮತದಾರರ ಕೆಟಗರಿಗೆ ಸೇರಿಸಲಾಗಿದೆ. 1997ರಲ್ಲಿ ಚುನಾವಣಾ ಆಯೋಗವು ಅಸ್ಸಾಂ ರಾಜ್ಯದ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದಾಗ ಈ ಹೊಸ ಕೆಟಗರಿಯನ್ನು ರಚಿಸಿತ್ತು. ಈ ವಿಭಾಗದ ಅಡಿಯಲ್ಲಿ ಮತದಾನ ಮಾಡಬಹುದು ಎಂದು ಹೇಳಿದೆ.

ಇನ್ನು ಡಿ ವೋಟರ್‌ಗಳ ಹೆಸರು ಅಸ್ಸಾಂ ಮತದಾರರ ಪಟ್ಟಿಯಲ್ಲಿ ಇದ್ದರೂ ವಿದೇಶಿ ನ್ಯಾಯಮಂಡಳಿಯಿಂದ ತೀರ್ಪು ಬರದೆ ಅವರು ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ 1.2 ಲಕ್ಷ  ಡಿ ವೋಟರ್‌ಗಳು ಮತದಾನ ಮಾಡಿಲ್ಲ. ಆದಾಗ್ಯೂ, ಎನ್‌ಆರ್‌ಸಿ ಕರಡು ಪಟ್ಟಿಯಿಂದ ಹೊರಗುಳಿದವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. 

ಈ ವಿಚಾರವಾಗಿ ಮಾಹಿತಿ ನೀಡಿರುವ ಚುನಾವಣಾ ಅಧಿಕಾರಿಯೊಬ್ಬರು, ಎನ್‌ಆರ್‌ಸಿ ಅಂತಿಮ ಪಟ್ಟಿಯನ್ನು ಆಧರಿಸಿರುವ ಮತದಾರರ ಪಟ್ಟಿಯಲ್ಲಿ ತಾನಾಗಿಯೇ ಡಿಲೀಟ್ ಮಾಡುವ ಆಯ್ಕೆ ಇಲ್ಲ. ಅದೇ ವೇಳೆ ಪಟ್ಟಿಯಲ್ಲಿ ಇಲ್ಲದವರನ್ನು ಡಿ ವೋಟರ್ ಎಂದು ಗುರುತಿಸಬಾರದು ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎನ್‌ಆರ್‌ಸಿ ಅಂತಿಮ ಪಟ್ಟಿ ಆಗಸ್ಟ್ 30ರಂದು ಪ್ರಕಟವಾಗಿದ್ದು ಅದರಲ್ಲಿ 3.11 ಕೋಟಿ  ಅರ್ಜಿದಾರರನ್ನು ಪೌರರಾಗಿ ಸೇರ್ಪಡೆ ಮಾಡಿತ್ತು. ಅದೇ ವೇಳೆ 19 ಲಕ್ಷ ಮಂದಿಯನ್ನು ಕೈ ಬಿಡಲಾಗಿತ್ತು. 19 ಲಕ್ಷ ಮಂದಿಯ ಪೈಕಿ ಎಷ್ಟು ಜನರು ಅಸ್ಸಾಂ ಮತದಾರರ ಪಟ್ಟಿಯಲ್ಲಿ ನೋಂದಣಿಯಾದವರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಎನ್ಆರ್‌ಸಿ ಪಟ್ಟಿಯಲ್ಲಿ ವ್ಯಕ್ತಿಗಳ ಹೆಸರು ಇಲ್ಲದೇ ಇದ್ದರೆ ಅವರನ್ನು ವಿದೇಶೀಯರು (ಅಕ್ರಮ ವಲಸೆಗಾರರು) ಎಂದು ಹೇಳುವಂತಿಲ್ಲ ಎಂದು ಆಗಸ್ಟ್  20ರಂದು ಗೃಹ ಸಚಿವಾಲಯ ಸ್ಪಷ್ಟನೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಸಮರ್ಥರಲ್ಲದಿದ್ದರೆ ಮೊದಲು ನೀವು ರಾಜಿನಾಮೆ ಕೊಡಿ: CJI ಸೂರ್ಯಕಾಂತ್ ರಾಜೀನಾಮೆಗೆ Congress ಒತ್ತಾಯ!

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!