ದೇಶ

ಚಿದಂಬರಂ-ಇಂದ್ರಾಣಿ ಭೇಟಿ ಸತ್ಯ, ಆದರೆ ಸಾಕ್ಷ್ಯ ನಾಶಪಡಿಸಲಾಗಿದೆ: ಸಿಬಿಐ

Srinivasamurthy VN

ನವದೆಹಲಿ: ಅಕ್ರಮ ಹಣ ವರ್ಗಾವಣೆ ಮತ್ತು ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಇಂದ್ರಾಣಿ ಮುಖರ್ಜಿ ಅವರನ್ನು ಭೇಟಿಯಾಗಿದ್ದು ನಿಜ. ಆದರೆ ಈ ಕುರಿತ ದಾಖಲೆಗಳನ್ನು ನಾಶ ಪಡಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ನಿನ್ನೆ ನಡೆದ ವಿಚಾರಣೆಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ ಸಿಬಿಐ ಅಧಿಕಾರಿಗಳು, ಚಿದಂಬರಂ ಅವರ ಕಚೇರಿಯ ಸಂದರ್ಶಕರ ನೋಂದಾವಣಿ ಪುಸ್ತಕ (visitors register)ವನ್ನು ನಾಶ ಮಾಡಲಾಗಿದೆ. ಈ ಬಗ್ಗೆ ಕೇಳಿದರೆ, ಅವಧಿ ಮೀರಿದ ಹಿನ್ನಲೆಯಲ್ಲಿ ನೋಂದಾವಣಿ ಪುಸ್ತಕವನ್ನು ನಾಶ ಮಾಡಲಾಯಿತು ಎಂದು ಹೇಳುತ್ತಾರೆ. ಆದರೆ 2017ರಲ್ಲಿ ಅವರ ವಿರುದ್ಧ ಎಫ್ ಐಆರ್ ದಾಖಲಾದಾಗಲೇ ನೋಂದಾವಣಿ ಪುಸ್ತಕವನ್ನು ನಾಶ ಮಾಡಲಾಗಿದೆ ಎಂದು ಸಿಬಿಐ ನ್ಯಾಯಮೂರ್ತಿ ಸುರೇಶ್ ಕೈತ್ ಅವರ ಬಳಿ ತಮ್ಮ ವಾದ ಮಂಡಿಸಿದೆ.

ಅಂತೆಯೇ ಚಿದಂಬರಂ ಮತ್ತು ಇಂದ್ರಾಣಿ ಭೇಟಿ ಸತ್ಯವಾಗಿದ್ದು, ಈ ಕುರಿತಂತೆ ಇಂದ್ರಾಣಿ ಮತ್ತು ಅವರ ಪತಿ ಪೀಟರ್ ಮುಖರ್ಜಿ ತಂಗಿದ್ದ ಹೊಟೆಲ್ ನ ದಾಖಲಾತಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ನೀಡಲಾಗಿದೆ, ಅಲ್ಲದೆ ಚಿದಂಬರಂ ಕಚೇರಿಗೆ ಇಂದ್ರಾಣಿ ಮತ್ತು ಪೀಟರ್ ಬಂದು ಹೋಗಿದ್ದ ಕಾರಿನ ವಿವರ ಕೂಡ ನೀಡಲಾಗಿದೆ. ಈ ಭೇಟಿ ಸಂದರ್ಭದಲ್ಲೇ ಇಂದ್ರಾಣಿ ತಮ್ಮ ಪುತ್ರನ ಕುರಿತು ಚಿದಂಬರಂರೊಂದಿಗೆ ಚರ್ಚೆ ನಡೆಸಿದ್ದರು ಎಂದು ಸಿಬಿಐ ಪರ ವಕೀಲ ಮೆಹ್ತಾ ತಮ್ಮ ವಾದ ಮಂಡಿಸಿದರು. 

2017ರಲ್ಲಿ ಚಿದಂಬರಂ ವಿರುದ್ಧ ಎಫ್ ಐಆರ್ ದಾಖಲಾದಾಗ ಚಿದಂಬರಂ ಕಚೇರಿಯಲ್ಲಿದ್ದ ವಿಸಿಟರ್ಸ್ ರಿಜಿಸ್ಟರ್ ಅನ್ನು ನಾಶ ಮಾಡಲಾಗಿದೆ ಎಂದು ಸಿಬಿಐ ಪರ ವಕೀಲ ಮೆಹ್ತಾ ಹೇಳಿದ್ದಾರೆ.

SCROLL FOR NEXT