ಸಾಂದರ್ಭಿಕ ಚಿತ್ರ 
ದೇಶ

ದೇಶದ 50 ಪ್ರಮುಖ ರೈಲು ಮಾರ್ಗಗಳ ಖಾಸಗೀಕರಣಕ್ಕೆ ಚಿಂತನೆ

ರೈಲ್ವೆ ಇಲಾಖೆ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು 50 ಪ್ರಮುಖ ರೈಲು ಮಾರ್ಗಗಳನ್ನು ಖಾಸಗೀಕರಣ ಮಾಡಲು ಗಂಭೀರ ಚಿಂತನೆ ಮಾಡಿದೆ.

ನವದೆಹಲಿ: ರೈಲ್ವೆ ಇಲಾಖೆ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು 50 ಪ್ರಮುಖ ರೈಲು ಮಾರ್ಗಗಳನ್ನು ಖಾಸಗೀಕರಣ ಮಾಡಲು ಗಂಭೀರ ಚಿಂತನೆ ಮಾಡಿದೆ.
  
ಈ ಸಂಬಂಧ ಕಳೆದ ಶುಕ್ರವಾರ ರೈಲ್ವೆ ಮಂಡಳಿಯ ಅಧಿಕಾರಿಗಳು ಯಾವ ಯಾವ ಮಾರ್ಗಗಳನ್ನು ಖಾಸಗಿಯವರಿಗೆ ವಹಿಸಿಕೊಡಬಹುದು ಎಂಬ ಬಗ್ಗೆ ಸಾಧಕ ಬಾಧಕ ಕುರಿತು ಚರ್ಚೆ ಮಾಡಿದ್ದಾರೆ ಎಂದು ರೈಲ್ವೆ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
  
ದೆಹಲಿ – ಮುಂಬೈ, ದೆಹಲಿ – ಲಕ್ನೋ, ದೆಹಲಿ – ಜಮ್ಮು, ದೆಹಲಿ – ಹೌರಾ, ದೆಹಲಿ – ಸಿಕಂದರಾಬಾದ್ ಮಾರ್ಗಗಳೂ ಸೇರಿದಂತೆ ಒಟ್ಟು 50 ಪ್ರಮುಖ ಮಾರ್ಗಗಳಲ್ಲಿ ಖಾಸಗಿಯವರಿಂದ ರೈಲು ಸಂಚಾರ ಆರಂಭಿಸಲು ಹಾಗೂ ಈ ಮೂಲಕ ಇಲಾಖೆಯ ಆದಾಯವನ್ನು ಹೆಚ್ಚಿಸಿಕೊಳ್ಳಲು ರೈಲ್ವೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ.
  
ಈಗಾಗಲೇ ಇಲಾಖೆಯ ನೂರು ದಿನಗಳ ಕಾರ್ಯಯೋಜನೆಯಲ್ಲಿ ಈ ಅಂಶವೂ ಸೇರಿದ್ದು ಇದಕ್ಕೆ ರೈಲ್ವೆ ಸಚಿವಾಲಯ ತಾತ್ವಿಕವಾಗಿ ಸಮ್ಮತಿ ನೀಡಿದೆ ಎಂದು ಹೇಳಲಾಗಿದೆ. ದೂರದ ಊರುಗಳಿಗೆ ಹೋಗುವ ರೈಲುಗಳನ್ನು ಖಾಸಗಿಕರಣ ಮಾಡುವುದರ ಜೊತೆಗೆ ಮುಂಬೈ, ದೆಹಲಿ , ಚೆನ್ನೈ, ಸಿಕಂದರಾಬಾದ್ ನಗರಗಳ ರೈಲು ಸಂಚಾರವನ್ನೂ ಸಹ ಖಾಸಗಿಯವರಿಗೆ ವಹಿಸಿಕೊಡಲು ರೈಲ್ವೆ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು ಈ ಸಂಬಂಧ ಮುಂದಿನ ವಾರ ಖಾಸಗಿ ಪ್ರವಾಸಿ ಸಂಸ್ಥೆಗಳಿಂದ ಟೆಂಡರ್ ಕರೆಯಲು ರೈಲ್ವೆ ಮಂಡಳಿಯ ಅಧಿಕಾರಿಗಳು ಚಿಂತನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವ ಬೆಂಗಳೂರು ನಿರ್ಮಾಣದತ್ತ ಡಿಕೆಶಿ ದೃಢ ಹೆಜ್ಜೆ: ₹1 ಲಕ್ಷ ಕೋಟಿ ಯೋಜನೆ; ಟನಲ್ ರೋಡ್ ಸೇರಿ 500 ಕಿ.ಮೀ ಹೊಸ ರಸ್ತೆ ನಿರ್ಮಾಣ!

ಮದುವೆ ಆಗದ್ದಿದ್ದರೂ ಅಭಿಷೇಕ್ ಶರ್ಮಾರ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್ ಆಚರಿಸಿದ ಯುವತಿ, Video!

CEC ವಿರುದ್ಧ ಇಂಡಿಯಾ ಒಕ್ಕೂಟದಿಂದ ಸಾರ್ವಜನಿಕ ದೋಷಾರೋಪಣೆ: ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅಧ್ಯಕ್ಷತೆ!

KPSC: ರಾಜ್ಯ ಸರ್ಕಾರಕ್ಕೆ ಭಾರಿ ಶಾಕ್; ಸುಪ್ರೀಂ ನಲ್ಲಿ 2022 ರ ವಿಶೇಷ ಕಾಯ್ದೆ ರದ್ದು! 362 ಕೆಎಎಸ್ ಅಧಿಕಾರಿಗಳ ನೌಕರಿಗೆ ಕುತ್ತು!

ಬೇರೆಯವರಿಗೆ ಉಪದೇಶ ನೀಡುವುದು ನಿಲ್ಲಿಸಿ; ವಾರಾಣಸಿ, ನಾಗ್ಪುರ ಬಿಜೆಪಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್‌ ತಿರುಗೇಟು